ದೋಹಾ(ಕತಾರ್): ಪ್ರತಿಷ್ಠಿತ ಏಷ್ಯಾನ್ ಫುಟ್‍ಬಾಲ್ ಕನ್‍ಫೆಡರೇಷನ್ ಕಪ್(ಎಎಫ್‍ಸಿ) ಫೈನಲ್ ನಲ್ಲಿ ಅತ್ಯುತ್ತಮ ಆಟವನ್ನು ಆಡಿದ ಬೆಂಗಳೂರು ಫುಟ್‍ಬಾಲ್ ಕ್ಲಬ್ (ಬಿಎಫ್‍ಸಿ) 1-0 ಗೋಲುಗಳ ಆಂತರದಿಂದ ಇರಾಕ್‍ನ ಏರ್‍ಫೋರ್ಸ್ ಕ್ಲಬ್ ತಂಡದ ವಿರುದ್ಧ ಸೋತಿದೆ.
70ನೇ ನಿಮಿಷದಲ್ಲಿ ಇರಾಕ್ ತಂಡ ಗೋಲು ಹೊಡೆಯುವ ಮೂಲಕ ಬಿಎಫ್‍ಸಿಯ ಆಸೆಗೆ ತಣ್ಣೀರು ಎರಚಿತು. ಈ ಮೂಲಕ ಮೊದಲ ಬಾರಿಗೆ ಎಎಫ್‍ಸಿ ಪ್ರಶಸ್ತಿಯನ್ನು ಭಾರತೀಯ ತಂಡ ಜಯಗಳಿಸಬೇಕೆಂಬ ಭಾರತೀಯರ ಕನಸು ನನಸಾಗಿಯೇ ಉಳಿಯಿತು.
ಭಾರತಕ್ಕೆ ಯಾಕೆ ಮಹತ್ವ: 2004ರಿಂದ ಆರಂಭಗೊಂಡ ಎಎಫ್‍ಸಿಯಲ್ಲಿ ಭಾರತದ ಯಾವೊಂದು ತಂಡ ಫೈನಲ್ ತಲುಪಿರಲಿಲ್ಲ. 2008ರಲ್ಲಿ ಡೆಂಪೊ ಮತ್ತು 2013ರಲ್ಲಿ ಈಸ್ಟ್ ಬೆಂಗಾಲ್ ತಂಡಗಳು ಎಎಫ್‍ಸಿ ಕಪ್‍ನಲ್ಲಿ ಸೆಮಿಫೈನಲ್ ತಲುಪಿತ್ತು. ಆದರೆ ಇದೆ ಮೊದಲ ಬಾರಿಗೆ ಬಿಎಫ್‍ಸಿ ಫೈನಲ್ ತಲುಪವ ಮೂಲಕ ಬೆಂಗಳೂರು ಫುಟ್‍ಬಾಲ್ ಕ್ಲಬ್ ವಿಶೇಷ ಸಾಧನೆ ಮಾಡಿತ್ತು.