ಬೆಂಗಳೂರು: ಸಚಿವ ರೋಷನ್ ಬೇಗ್ ಮೇಲೆ ಸಂಸದೆ ಶೋಭಾ ಕರಂದ್ಲಾಜೆ ಮಾಡಿರುವ ರುದ್ರೇಶ್ ಕೊಲೆಗೆ ಸುಪಾರಿ ಆರೋಪ ಸಾಬೀತಾದ್ರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಅಂತ ಶಾಸಕ ಜಮೀರ್ ಅಹ್ಮದ್ ಸವಾಲು ಹಾಕಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಶೋಭಾ ಮಾಡಿರುವ ಆರೋಪ ಇಡೀ ಮುಸ್ಲಿಂ ಮುಖಂಡರ ಮೇಲೆ ಮಾಡಿದ ಆರೋಪವಾಗಿದೆ. ಶೋಭಾ ಅವರು ರೋಷನ್ ಬೇಗ್ ವಿರುದ್ಧ ಮಾಡುತ್ತಿರುವ ಆರೋಪಕ್ಕೆ ದಾಖಲೆ ನೀಡಲಿ ಅಂತ ಆಗ್ರಹಿಸಿದರು.
ನಾನೂ ಸಹ ಪ್ರಕರಣವನ್ನು ಸಿಬಿಐ ತನಿಖೆ ವಹಿಸುವಂತೆ ಸಿಎಂಗೆ ಮನವಿ ಮಾಡುತ್ತೇನೆ. ಒಂದ್ವೇಳೆ ಆರೋಪ ಸಾಬೀತಾದ್ರೆ ರೋಷನ್‍ಬೇಗ್ ಜೈಲಿಗೆ ಹೋಗ್ತಾರೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ. ಆದ್ರೆ ಆರೋಪ ಸಾಬೀತಾಗದೇ ಇದ್ರೆ ಶೋಭಾ ರಾಜಕೀಯ ನಿವೃತ್ತಿ ಹೊಂದಲಿ ಅಂತ ಸವಾಲು ಹಾಕಿದರು.
ಜೆಡಿಎಸ್ ಬಗ್ಗೆ ಮಾತನಾಡಿದ ಅವರು, ಕುಮಾರ ಸ್ವಾಮಿಯವರಿಗೆ ಹೇಳಿಯೇ ನಾವು ಕಾಂಗ್ರೆಸ್‍ಗೆ ಮತ ಹಾಕಿದ್ವಿ. ಅವರಿಗೆ ರಾಜಕೀಯ ಅಗತ್ಯವಿರಬಹುದು. ಆದ್ರೆ ನನಗೆ ರಾಜಕೀಯ ಅಗತ್ಯವಿಲ್ಲ ಅಂತ ಹೇಳಿದ್ರು.