Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80042

ಈ ಫೋನ್‍ಗಳಿಗೆ ಇನ್ನು ಮುಂದೆ ವಾಟ್ಸಪ್ ಸಪೋರ್ಟ್ ಮಾಡಲ್ಲ

$
0
0

ನವದೆಹಲಿ: ನೀವು ಹಳೇಯ ಆಂಡ್ರಾಯ್ಡ್, ಐಓಎಸ್, ಸಿಂಬಿಯನ್ ಓಎಸ್ ಆಧಾರಿತ ಸ್ಮಾರ್ಟ್ ಫೋನ್‍ಗಳಲ್ಲಿ ವಾಟ್ಸಪ್ ಬಳಸುತ್ತಿದ್ದೀರಾ? ಹಾಗಾದ್ರೆ ಕೂಡಲೇ ಹೊಸ ಸ್ಮಾರ್ಟ್ ಫೋನ್ ಖರೀದಿಸಿ.

ವಿಶ್ವದ ನಂಬರ್ ಒನ್ ಮೆಸೇಂಜಿಗ್ ಅಪ್ಲಿಕೇಶನ್ ವಾಟ್ಸಪ್ ಹಳೇಯ ಓಎಸ್ ಫೋನ್‍ಗಳಿಗೆ ಅಪ್‍ಗ್ರೇಡ್ ಕೊಡುವುದಿಲ್ಲ ಎಂದು ಈ ವರ್ಷದ ಫೆಬ್ರವರಿಯಲ್ಲಿ ತನ್ನ ಬ್ಲಾಗ್‍ನಲ್ಲಿ ತಿಳಿಸಿದ್ದು, ಈ ಗಡುವು ಡಿಸೆಂಬರ್ 31ಕ್ಕೆ ಅಂತ್ಯವಾಗಲಿದೆ.

ಇದನ್ನೂ ಓದಿ: 2ನೇ ಸ್ಥಾನದಿಂದ ಜಾರಿದ ಮೈಕ್ರೋಮ್ಯಾಕ್ಸ್, ಟಾಪ್ -5 ಪಟ್ಟಿಯಲ್ಲಿ ಕ್ಸಿಯೋಮಿ

ಗಡುವು ಅಂತ್ಯವಾಗುವ ಹಿನ್ನೆಲೆಯಲ್ಲಿ ಬಳಕೆದಾರರು ಅಪ್ ಗ್ರೇಡ್ ಓಎಸ್ ಅವೃತ್ತಿ ಹೊಂದಿರುವ ಫೋನ್‍ಗಳನ್ನು ಖರೀಸುವುದು ಉತ್ತಮ.

ಈ ಫೋನ್‍ಗಳಿಗೆ ವಾಟ್ಸಪ್ ಸಪೋರ್ಟ್ ಮಾಡಲ್ಲ
– ಬ್ಲಾಕ್‍ಬೆರಿ ಓಎಸ್ ಮತ್ತು ಬ್ಲಾಕ್‍ಬೆರಿ 10
– ನೋಕಿಯಾ ಎಸ್40 ಮತ್ತು, ನೋಕಿಯಾ ಎಸ್ 60
– ಗೂಗಲ್‍ನ ಆಂಡ್ರಾಯ್ಡ್ 2.1 ಮತ್ತು 2.2 ಆವೃತ್ತಿಯ ಫೋನ್‍ಗಳು
– ಮೈಕ್ರೋಸಾಫ್ಟ್ ವಿಂಡೋಸ್‍ಫೋನ್ 7.1 ಓಎಸ್ ಬಳಸುವ ಫೋನ್‍ಗಳು
– ಆಪಲ್ ಐಫೋನ್ 3ಜಿಎಸ್ ಮತ್ತು ಐಓಎಸ್ 6 ಬಳಸುವ ಫೋನ್‍ಗಳು


Viewing all articles
Browse latest Browse all 80042


<script src="https://jsc.adskeeper.com/r/s/rssing.com.1596347.js" async> </script>