Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80032

ಕೇಂದ್ರದಿಂದ 4 ರೂಪದ ಜಿಎಸ್‍ಟಿ ತೆರಿಗೆ ದರ ಫೈನಲ್

$
0
0

– ತಂಬಾಕು, ಕೂಲ್‍ಡ್ರಿಂಕ್ಸ್, ಪಾನ್ ಮಸಾಲಾ ದುಬಾರಿ

ನವದೆಹಲಿ: `ಒಂದು ದೇಶ.. ಒಂದು ತೆರಿಗೆ’ ಎನ್ನುವ ಕೇಂದ್ರ ಸರ್ಕಾರದ ಅತ್ಯಂತ ಮಹತ್ವದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ದರ ಅಂತಿಮವಾಗಿದೆ. ನಾಲ್ಕು ರೂಪದ ತೆರಿಗೆ ದರವನ್ನು ಜಿಎಸ್‍ಟಿ ಸಮಿತಿ ಸಭೆಯಲ್ಲಿ ಅಂತಿಮಗೊಳಿಸಲಾಗಿದೆ.

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನೇತೃತ್ವದಲ್ಲಿ ನಡೆದ ರಾಜ್ಯಗಳ ಹಣಕಾಸು ಸಚಿವರ ಜಿಎಸ್‍ಟಿ ಸಮಿತಿ ಸಭೆಯಲ್ಲಿ ತೆರಿಗೆ ದರಕ್ಕೆ ಒಪ್ಪಿಗೆ ನೀಡಲಾಗಿದೆ. ಸಭೆಯಲ್ಲಿ ಕನಿಷ್ಠ ತೆರಿಗೆ ದರ ಉದ್ದೇಶಿತ ಶೇ.6ರಷ್ಟು ಬದಲು 5ರಷ್ಟು ಹಾಗೂ ಗರಿಷ್ಠ ಉದ್ದೇಶಿತ ತೆರಿಗೆ ಶೇ.26ರ ಬದಲು 28ರಷ್ಟು ತೆರಿಗೆ ವಿಧಿಸಲು ಒಪ್ಪಿಗೆ ಸಿಕ್ಕಿದೆ. ಇದರ ಜೊತೆಗೆ ಶೇ.12 ಮತ್ತು ಶೇಕಡಾ 18ರಷ್ಟು ತೆರಿಗೆಯನ್ನು ವಿಧಿಸಲಾಗಿದೆ.

ಆಹಾರ ಉತ್ಪನ್ನಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ತಂಬಾಕು, ಪಾನ್‍ಮಸಾಲಾ, ತಂಪು ಪಾನಿಯಾ, ಸ್ಪೋಟ್ಸ್ ಯುಟಿಲಿಟಿ ವಾಹನಗಳಿಗೆ ಕ್ಲೀನ್ ಎನರ್ಜಿ ಸೆಸ್ ಹಾಕಲಾದ ಕಾರಣ ಇವುಗಳು ದುಬಾರಿಯಾಗಲಿದೆ.

ರಾಜ್ಯಗಳಿಗೆ ಪರಿಹಾರ ರೂಪದಲ್ಲಿ 50 ಸಾವಿರ ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಕೊಡಲಿದೆ. ಮುಂದಿನ ಐದು ವರ್ಷಗಳ ಕಾಲ ಇರುತ್ತದೆ ಈ ರೀತಿಯ ಪರಿಹಾರ ರೂಪದ ಸೆಸ್ ನೀಡಲಾಗುವುದು. ಗ್ರಾಹಕ ಸಂವೇದಿ ಸೂಚ್ಯಂಕದಲ್ಲಿರುವ(ಸಿಪಿಐ) ಶೇ. 50ರಷ್ಟು ವಸ್ತುಗಳು ಶೂನ್ಯ ತೆರಿಗೆ ವ್ಯಾಪ್ತಿಯಲ್ಲಿ ಬರುತ್ತವೆ. ಅದರಲ್ಲಿ ಜನಸಾಮಾನ್ಯರು ಬಳಸುವ ಆಹಾರಧಾನ್ಯಗಳು ಬರಲಿದೆ ಎಂದು ಅರುಣ್ ಜೇಟ್ಲಿ ಹೇಳಿದರು.

ಜಿಎಸ್‍ಟಿ ಕೌನ್ಸಿಲ್ ಅನುಮೋದನೆ ಮಾಡಿರುವ ತೆರಿಗೆ ದರಕ್ಕೆ ರಾಜ್ಯಗಳ ವಿಧಾನಸಭೆಗಳು ಅನುಮೋದನೆ ನೀಡಬೇಕು. ಬಳಿಕ ಅದಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಬೇಕು. ಬಳಿಕ ಅಂತಿಮವಾಗಿ 2017ರ ಏಪ್ರಿಲ್ 1 ರಿಂದ ಜಿಎಸ್‍ಟಿ ಜಾರಿಯಾಗಲಿದೆ.


Viewing all articles
Browse latest Browse all 80032


<script src="https://jsc.adskeeper.com/r/s/rssing.com.1596347.js" async> </script>