ತುಮಕೂರು: ಪತಿ ಅಪಘಾತಕ್ಕೀಡಾಗಿದ್ದಾನೆಂದು ಆಂಬುಲೆನ್ಸ್ ಡ್ರೈವರ್ ಪತ್ನಿಯನ್ನು ಕರೆಸಿಕೊಂಡು ಅತ್ಯಾಚಾರವೆಸಗಿ ಮೂರು ವರ್ಷದ ಹೆಣ್ಣು ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
36 ವರ್ಷದ ಮಹಿಳೆ ಶನಿವಾರ ಸಂಜೆ ಅತ್ಯಾಚಾರಕ್ಕೆ ಒಳಗಾಗಿದ್ದು, ಪಾವಗಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ತನಗೆ ಕರೆ ಮಾಡಿದ್ದವರು ಯಾರು, ಘಟನೆಯ ಹಿನ್ನೆಲೆಯ ಬಗ್ಗೆ ಪೊಲೀಸರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ತೀವ್ರ ಅಸ್ವಸ್ಥಗೊಂಡಿರುವ ಮಹಿಳೆಯನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೋಲೀಸರಿಗೆ ಕಾಮುಕರ ಬಗ್ಗೆ ಮಾಹಿತಿ ನೀಡುವಲ್ಲಿ ಮಹಿಳೆ ಹಿಂದೇಟು ಹಾಕುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಅತ್ಯಾಚಾರಕ್ಕೆ ಒಳಗಾದ ಪತ್ನಿಯನ್ನು ನೋಡಲು ಪುಟ್ಟಪರ್ತಿಯಲ್ಲಿ ಅಂಬುಲೆನ್ಸ್ ಡ್ರೈವರ್ ಆಗಿರುವ ಅಂಜನೇಯಲು ಆಸ್ಪತ್ರೆಗೆ ಬಂದಿದ್ದಾರೆ.
ಮಹಿಳೆ ಮೇಲೆ ಶಂಕೆ: 2 ವರ್ಷಗಳ ಹಿಂದೆಯೂ ಈಕೆಯ ಮೊದಲ ಮಗು ಸಾವನ್ನಪ್ಪಿತ್ತಂತೆ. ಈಗ 2 ನೇ ಮಗು ಕೂಡಾ ಕೊಲೆಯಾಗಿದೆ ಎಂದು ಮಹಿಳೆ ಹೇಳುತ್ತಿದ್ದಾಳೆ. ಹೀಗಾಗಿ ಮಹಿಳೆ ಮೇಲೆಯೇ ಅನುಮಾನ ಆರಂಭವಾಗಿದೆ. ಆಕೆಗೆ ಅಕ್ರಮ ಸಂಬಂಧ ಇತ್ತು. ಈ ಕಾರಣಕ್ಕಾಗಿ ಮಗುವನ್ನು ಹತ್ಯೆ ಮಾಡಿರಬಹುದು ಎಂದು ಪತಿ ಆಂಜನೇಯಲು ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ.