Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80072

ಒಂದೇ ರಾಕೆಟ್‍ನಲ್ಲಿ 82 ಉಪಗ್ರಹ; ವಿಶ್ವದಾಖಲೆ ನಿರ್ಮಿಸಲು ಹೊರಟಿದೆ ನಮ್ಮ ಇಸ್ರೋ

$
0
0

ಮುಂಬೈ: ಕಡಿಮೆ ಖರ್ಚಿನಲ್ಲಿ ಮಂಗಳಯಾನ ಕೈಗೊಂಡು ಯಶಸ್ವಿಯಾಗಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಇದೀಗ ಒಂದೇ ರಾಕೆಟ್ ನಲ್ಲಿ 82 ಉಪಗ್ರಹಗಳನ್ನು ಹಾರಿಸಿ ವಿಶ್ವದಾಖಲೆ ಬರೆಯಲು ಮುಂದಾಗಿದೆ.

2017ರ ಜನವರಿ 15ರಂದು ಇಸ್ರೋ 82 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. 82 ಉಪಗ್ರಹಗಳ ಪೈಕಿ 60 ಅಮೆರಿಕದ್ದು, 20 ಯುರೋಪ್, 2 ಇಂಗ್ಲೆಂಡಿನದ್ದು ಎಂದು ಮಂಗಳಯಾನ ಯೋಜನೆಯ ನಿರ್ದೇಶಕರಾಗಿದ್ದ ಸುಬ್ಬಯ್ಯ ಅರುಣನನ್ ತಿಳಿಸಿದರು.

ಇದೇ ವೇಳೆ ಎರಡನೇ ಮಂಗಳಯಾನವನ್ನು ಇಸ್ರೋ 2020ಕ್ಕೆ ಕೈಗೊಂಡರೆ, ಎರಡನೇ ಚಂದ್ರಯಾನವನ್ನು ಡಿಸೆಂಬರ್ 2018ರಂದು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಒಂದು ರಾಕೆಟ್ ಬಳಸಿಕೊಂಡು ಅತಿ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಿದ ದೇಶ ಎಂಬ ಹೆಗ್ಗಳಿಕೆಗೆ ರಷ್ಯಾ ಪಾತ್ರವಾಗಿದ್ದು, ಜೂನ್ 19, 2014ರಂದು 37 ಉಪಗ್ರಹಗಳನ್ನು ಉಡಾವಣೆ ಮಾಡಿದ್ದರೆ, ನವೆಂಬರ್ 19, 2013ರಂದು ಅಮೆರಿಕ 29 ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಈ ವರ್ಷದ ಜೂನ್‍ನಲ್ಲಿ ಭಾರತ 20 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು.

2013 ನವೆಂಬರ್ 5ರಂದು ಉಡಾವಣೆಗೊಂಡು 2014ರ ಸೆಪ್ಟೆಂಬರ್ 24ರಂದು ಮಂಗಳ ಕಕ್ಷೆ ತಲುಪಿದ ಮಂಗಳಯಾನ ಯೋಜನೆಗೆ ಭಾರತ 450 ಕೋಟಿ ರೂ. ಖರ್ಚು ಮಾಡಿತ್ತು.


Viewing all articles
Browse latest Browse all 80072