Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80032

ತವರಲ್ಲಿ ಸೋತ್ರೂ ಧೋನಿಯ ಮ್ಯಾಜಿಕ್ ರನೌಟ್ ವಿಡಿಯೋ ಈಗ ವೈರಲ್

$
0
0

ರಾಂಚಿ: ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ 4ನೇ ಏಕದಿನ ಪಂದ್ಯದಲ್ಲಿ ಧೋನಿ ಸೋತಿರಬಹುದು. ಆದರೆ ಅವರು ರನ್ ಔಟ್ ಮಾಡಿಸುತ್ತಿರುವ ವಿಡಿಯೋ ಮಾತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು. ಉಮೇಶ್ ಯಾದವ್ ಎಸೆದ 45ನೇ ಓವರ್ ನಲ್ಲಿ 34 ರನ್ ಗಳಿಸಿದ್ದ ನ್ಯೂಜಿಲೆಂಡ್ ಆಟಗಾರ ರಾಸ್ ಟೇಲರ್ ಬಲವಾಗಿ ಎಡಗಡೆಗೆ ಹೊಡೆದಿದ್ದಾರೆ. ಈ ಬಾಲನ್ನು ಬೌಂಡರಿ ಗೆರೆ ಬಳಿ ತಡೆದ ಧವಲ್ ಕುಲಕರ್ಣಿ ಧೋನಿ ಕಡೆಗೆ ಎಸೆದಿದ್ದಾರೆ. ಈ ವೇಳೆ ಬಾಲನ್ನು ಕೈಯಲ್ಲಿ ಹಿಡಿದ ಧೂನಿ 10 ಅಡಿ ದೂರದಿಂದ ವಿಕೆಟ್ ನೋಡದೇ ನೇರವಾಗಿ ರನ್ ಔಟ್ ಮಾಡಿದ್ದಾರೆ.

ಧೋನಿ ರನ್ ಔಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬ್ಲೈಂಡ್ ರನ್ ಔಟ್ ಎಂದು ಅಭಿಮಾನಿಗಳು ಹೆಸರನ್ನಿಟ್ಟಿದ್ದಾರೆ. ಧೋನಿ ಈ ರೀತಿ ರನ್ ಔಟ್ ಮಾಡುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಇದೇ ರೀತಿಯಲ್ಲಿ ರನ್ ಔಟ್ ಮಾಡಿದ್ದಾರೆ.


Viewing all articles
Browse latest Browse all 80032


<script src="https://jsc.adskeeper.com/r/s/rssing.com.1596347.js" async> </script>