ನವದೆಹಲಿ: ದೀಪಾವಳಿ ಗಿಫ್ಟ್ ಎಂಬಂತೆ ಕೇಂದ್ರ ಸರ್ಕಾರ ನೌಕರರ ತುಟ್ಟಿ ಭತ್ಯೆಯನ್ನು ಏರಿಕೆ ಮಾಡಿದೆ. ನೌಕರರಿಗೆ ಮತ್ತು ಪಿಂಚಣಿದಾರರರಿಗೆ ಶೇ.2ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಗುರುವಾರ ಮಧ್ಯಾಹ್ನ ಪ್ರಧಾನಿಯವರ ಕಚೇರಿಯಲ್ಲಿ ನಡೆ ಸಂಪುಟ ಸಭೆಯಲ್ಲಿ ತುಟ್ಟಿ ಭತ್ಯೆ ಹೆಚ್ಚಳ ಮಾಡುವ ನಿರ್ಧಾರವನ್ನು ಅಂಗೀಕರಿಸಲಾಗಿದೆ. ದೇಶದಲ್ಲಿ 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 58 ಲಕ್ಷದಷ್ಟು ಪಿಂಚಣಿದಾರರು ಇದ್ದಾರೆ.