ಬೆಂಗಳೂರು: ‘ಕೊಲೆ ಆಗಿರತ್ತೆ, ಆದರೆ ಸಾಕ್ಷಿ ಇರಲ್ಲ’ -ಇದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಸಿಬಿಐ ವಿಶೇಷ ಕೋರ್ಟ್ ಕ್ಲೀನ್ ಚಿಟ್ ನೀಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ನೀಡಿದ ಪ್ರತಿಕ್ರಿಯೆ.
ಬಿಎಸ್‍ವೈ ಅವರನ್ನು ಖುಲಾಸೆಗೊಳಿಸಿದ್ದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಮಾಧ್ಯಮಗಳು ಕೇಳಿದ್ದಕ್ಕೆ, ಕೊಲೆ ಆಗಿರುತ್ತದೆ. ಆದರೆ ಸಾಕ್ಷಿ ಇರುವುದಿಲ್ಲ. ಹೀಗಾಗಿ ಆರೋಪಿಗಳು ದೋಷಮುಕ್ತರಾಗುತ್ತಾರೆ. ಆದರೆ ಕೊಲೆ ಆಗಿರುವುದು ಸುಳ್ಳೇ ಎಂದು ಅವರು ಪ್ರಶ್ನಿಸಿದರು.
ಇದೇ ವೇಳೆ ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ಜನ ತೀರ್ಮಾನಿಸುತ್ತಾರೆ, ಕೋರ್ಟ್ ತೀರ್ಮಾನಿಸುವುದಿಲ್ಲ ಎಂದು ಹೇಳಿದರು.
ಪ್ರತಿಕ್ರಿಯೆ ನೀಡಲ್ಲ: ಸಿಎಂ ಹೇಳಿಕೆಗೆ ಬಿಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ಅವರು ಹೀಗೆ ಮಾತನಾಡಿ, ಮಾತನಾಡಿಯೇ ಅವರ ಪಕ್ಷ ನೆಲ ಕಚ್ಚಿದೆ. ನಾನು ಈಗ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.