– ಪಾಂಪೋರ್‍ನಲ್ಲಿ ಮತ್ತೆ ಗುಂಡಿನ ಚಕಮಕಿ
ನವದೆಹಲಿ: ಸುಮಾರು 90 ವರ್ಷಗಳ ಬಳಿಕ ಆರ್‍ಎಸ್‍ಎಸ್‍ನ ಡ್ರೆಸ್‍ಕೋಡ್ ಇವತ್ತಿನಿಂದ ಬದಲಾಗಿದೆ. ಖಾಕಿ ಚಡ್ಡಿ ಬದಲು ಕಂದು ಬಣ್ಚದ ಪ್ಯಾಂಟ್, ಶರ್ಟ್‍ನಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತರು ಮಿಂಚುತ್ತಿದ್ದಾರೆ.
ಆರ್‍ಎಸ್‍ಎಸ್ ಸಂಸ್ಥಾಪನಾ ದಿನವಾದ ಇಂದು ಆರ್‍ಎಸ್‍ಎಸ್ ಕರ್ಯಕರ್ತರು ಮಹಾರಾಷ್ಟ್ರದ ನಾಗ್ಪುರದಲ್ಲಿ ಹೊಸ ಸಮವಸ್ತ್ರ ಧರಿಸಿ ಪಥಸಂಚಲನ ನಡೆಸಿದ್ರು.
ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದಲ್ಲಿ ವಿಜಯದಶಮಿ ಪ್ರಯುಕ್ತ ರಾವಣ ಸಂಹಾರ ನಡೆಸಲಿದ್ದಾರೆ. ಉತ್ತರಪ್ರದೇಶದಲ್ಲಿ ಚುನಾವಣೆ ಇರೋದ್ರಿಂದ ಮೋದಿ ಭೇಟಿ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಮೋದಿ ಭೇಟಿಗೆ ಸ್ವಾಗತ ಕೋರಿರೋ ಬಿಜೆಪಿ ಕಾರ್ಯಕರ್ತರು, ಉರಿ ದಾಳಿಗೆ ಪ್ರತೀಕಾರ ತೀರಿಸಿದ ಪ್ರಧಾನಿಗೆ ಸ್ವಾಗತ ಅಂತ ಬ್ಯಾನರ್‍ಗಳನ್ನ ಹಾಕಿದ್ದಾರೆ.
ವಿಜಯದಶಮಿಯ ಸಂಭ್ರಮದ ಮಧ್ಯೆ ಭಾರತಕ್ಕೆ ಪಾಕ್ ಉಗ್ರರ ದಾಳಿ ಭೀತಿ ಎದುರಾಗಿದೆ. ಭಾರತದ ಸರ್ಜಿಕಲ್ ಸ್ಟ್ರೈಕ್‍ಗೆ ಪ್ರತಿಕಾರ ತೀರಿಸಿಕೊಳ್ಳಲು ಪಾಕ್‍ನ ಮೂರು ಉಗ್ರ ಸಂಘಟನೆಯ ಸುಮಾರು 250 ಮಂದಿ ಉಗ್ರರು ಕಾಶ್ಮೀರದೊಳಗೆ ನುಗ್ಗಿದ್ದಾರೆ ಎನ್ನಲಾಗಿದೆ. ಭಾರತದ ಸೈನಿಕರ ಮೇಲೆ ದಾಳಿಗೆ ಉಗ್ರರು ಸಂಚು ನಡೆಸ್ತಿದ್ದು, ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಎಲ್‍ಇಟಿ, ಜೈಶಿ ಮೊಹಮ್ಮದ್ ಸಂಘಟನೆ, ಹಾಗು ಇಜ್ಬುಲ್ ಮುಜಾಹೀದ್ ಉಗ್ರರು ಕಾಶ್ಮೀರದಲ್ಲಿ ತಲೆಮರೆಸಿಕೊಂಡಿದ್ದು ಒಟ್ಟಾಗಿ ದಾಳಿ ನಡೆಸೋ ಎಚ್ಚರಿಕೆಯನ್ನ ಗುಪ್ತಚರ ಇಲಾಖೆ ನೀಡಿದೆ.
ಈ ಮಧ್ಯೆ ಕಾಶ್ಮೀರದ ಪಾಂಪೋರ್‍ನಲ್ಲಿ ಮಧ್ಯರಾತ್ರಿ 12 ಗಂಟೆಯಿಂದ 2 ಗಂಟೆವರೆಗೂ ಮತ್ತೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಅತ್ತ ಪಾಕಿಸ್ತಾನ ಯುದ್ಧ ನಡೆದ್ರೆ ಆರ್ಥಿಕವಾಗಿ ಎಷ್ಟು ನಷ್ಟ ನಡೆಯಬಹುದು ಎಂಬ ಲೆಕ್ಕಾಚಾರವನ್ನ ಹಾಕುತ್ತಿದೆ ಅಂತ ಪಾಕ್ ಮಾಧ್ಯಮಗಳು ವರದಿ ಮಾಡಿವೆ.