ಸಿಹಿ ಪದಾರ್ಥಗಳಲ್ಲಿ ಎಲ್ಲರಿಗೂ ಪ್ರಿಯವಾಗುವಂತದ್ದು ಕಾಜೂ ಬರ್ಫಿ. ಅದನ್ನು ಮಾಡುವುದು ಬ್ರಹ್ಮವಿದ್ಯೆಯೇನಲ್ಲ. ನಿಮ್ಮ ಮನೆಯಲ್ಲೇ ಅತ್ಯಂತ ಸುಲಭವಾಗಿ ಸ್ವಾದಿಷ್ಟವಾದ ಕಾಜೂ ಬರ್ಫಿ ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು:
1. ಕಾಜೂ/ಗೋಡಂಬಿ – 250 ಗ್ರಾಂ
2. ಸಕ್ಕರೆ – 200 ಗ್ರಾಂ
3. ಹಾಲು – ಒಂದು ಕಪ್
4. ತುಪ್ಪ – ಸ್ವಲ್ಪ
5. ಏಲಕ್ಕಿ ಪುಡಿ- ಸ್ವಲ್ಪ
ಮಾಡುವ ವಿಧಾನ:
* ಒಂದು ಜಾರ್‍ಗೆ ಗೋಡಂಬಿ ಮತ್ತು ಹಾಲನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
* ಒಂದು ಪಾತ್ರೆಗೆ ಸ್ವಲ್ಪ ತುಪ್ಪ ಹಾಕಿ, ರುಬ್ಬಿದ ಮಿಶ್ರಣ ಮತ್ತು ಸಕ್ಕರೆ ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ.
* ಮಿಶ್ರಣ ಗಟ್ಟಿಯಾಗುವ ತನಕ ತಳಹಿಡಿಯದಂತೆ ತಿರುವುತ್ತಿರಿ.
* ಚಪಾತಿ ಹಿಟ್ಟಿನಂತೆ ಮಿಶ್ರಣ ಗಟ್ಟಿಯಾದಾಗ ಏಲಕ್ಕಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ ಪಾತ್ರೆಯನ್ನು ಕೆಳಗಿಳಿಸಿ.
* ಮಿಶ್ರಣ ತಣ್ಣಗಾದ ನಂತರ ಮಣೆ ಮೇಲೆ ಹಾಕಿ ಲಟ್ಟಿಸಿಕೊಳ್ಳಿ.
* ನಂತರ ಡೈಮಂಡ್ ಆಕಾರದಲ್ಲಿ ಕಟ್ ಮಾಡಿ ಸವಿಯಲು ಕೊಡಿ.