ಬೆಂಗಳೂರು: ರಾಜ್ಯದಲ್ಲಿ ಮತ್ತೆ 42 ತಾಲೂಕುಗಳು ಬರಪೀಡಿತ ತಾಲೂಕುಗಳಾಗಿ ಘೋಷಣೆಯಾಗಿದೆ. ಇಂದು ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆ ಬಳಿಕ ಕಾನೂನು ಸಚಿವ ಟಿ.ಬಿ.ಜಯಚಂದ್ರ, 13 ಜಿಲ್ಲೆಗಳ 42 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲು ಸಂಪುಟ ನಿರ್ಧರಿಸಿದೆ ಎಂದರು.
ಈ ಮೊದಲು 68 ತಾಲೂಕುಗಳು ಬರ ಪೀಡಿತ ಎಂದು ಘೋಷಿಸಲಾಗಿತ್ತು. ಆದರೆ ಇಂದು ಮತ್ತೆ 42 ತಾಲೂಕುಗಳು ಈ ಪಟ್ಟಿಗೆ ಸೇರಿರುವುದರಿಂದ ಒಟ್ಟು 110 ತಾಲೂಕುಗಳು ಬರಪೀಡಿತವಾದಂತಾಗಿದೆ. ಈ ಎಲ್ಲಾ ತಾಲೂಕುಗಳ ನಷ್ಟದ ಅಂದಾಜು ಮಾಡಿದ ನಂತರ ಕೇಂದ್ರಕ್ಕೆ ಮನವಿ ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.
ಯಾವ್ಯಾವ ತಾಲೂಕು.?
13 ಜಿಲ್ಲೆಗಳ 42 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು ಅವುಗಳ ವಿವರ ಇಂತಿದೆ.
1. ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ
2. ರಾಮನಗರ: ಚನ್ನಪಟ್ಟಣ, ಕನಕಪುರ, ಮಾಗಡಿ, ರಾಮನಗರ
3. ಕೋಲಾರ: ಕೋಲಾರ, ಮಾಲೂರು, ಮುಳಬಾಗಲು, ಶ್ರೀನಿವಾಸಪುರ
4. ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ, ಚಿಂತಾಮಣಿ, ಗುಡಿಬಂಡೆ, ಶಿಡ್ಲಘಟ್ಟ
5. ತುಮಕೂರು: ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ತಿಪಟೂರು, ತುಮಕೂರು, ತುರುವೇಕೆರೆ
6. ಚಿತ್ರದುರ್ಗ: ಹೊಸದುರ್ಗ
7. ದಾವಣಗೆರೆ: ಹರಪನಹಳ್ಳಿ, ಜಗಳೂರು
8. ಮಂಡ್ಯ: ಮದ್ದೂರು, ಮಂಡ್ಯ, ನಾಗಮಂಗಲ,
9. ಬಳ್ಳಾರಿ: ಸಂಡೂರು
10. ಹಾವೇರಿ: ಬ್ಯಾಡಗಿ, ಹಾನಗಲ್, ಹಾವೇರಿ, ಶಿಗ್ಗಾಂವಿ
11. ಧಾರವಾಡ: ಧಾರವಾಡ
12. ಶಿವಮೊಗ್ಗ: ಶಿಕಾರಿಪುರ, ಶಿವಮೊಗ್ಗ, ಸೊರಬ
13. ಹಾಸನ: ಆಲೂರು, ಚನ್ನರಾಯಪಟ್ಟಣ, ಹೊಳೆನರಸೀಪುರ