ವಾಷಿಂಗ್ಟನ್: ವಾಹನಗಳು ಕೋಳಿ, ಮೇಕೆ ಅಥವಾ ಹಸು ಇನ್ನೂ ಮುಂತಾದ ಪ್ರಾಣಿಗಳಿಗೆ ಗುದ್ದಿರೋ ಅನೇಕ ಪ್ರಕರಣಗಳು ಸಿಗುತ್ತವೆ. ಅಂತಹ ಸಂದರ್ಭಗಳಲ್ಲಿ ಆ ಪ್ರಾಣಿಗಳು ಗಾಯಗೊಂಡು ಅಲ್ಲೇ ಕುಸಿದು ಬೀಳುತ್ತವೆ. ಅಥವಾ ವಾಹನ ಚಾಲಕರು ಅದಕ್ಕೆ ಸೂಕ್ತ ಚಿಕಿತ್ಸೆ ಕೊಡಿಸೋ ಕೆಲಸ ಮಾಡುತ್ತಾರೆ. ಆದ್ರೆ ಅಮೆರಿಕದಲ್ಲಿ ಮಹಿಳೆಯೊಬ್ಬಳು ಜಿಂಕೆಗೆ ಕಾರ್‍ನಿಂದ ಗುದ್ದಿದ್ದು ಆ ಜಿಂಕೆ ಆಕೆಯ ಮೇಲೆರಗಿ ತನ್ನ ಮೂಕವೇದನೆ ವ್ಯಕ್ತಪಡಿಸಿದೆ.
ಎರಡು ವಾರಗಳ ಹಿಂದೆ ಅಮೆರಿಕದ ನ್ಯೂ ಜೆರ್ಸಿಯಲ್ಲಿ ಈ ಘಟನೆ ನಡೆದಿದೆ. 43 ವರ್ಷದ ಎಲೆನ್ ಎಂಬಾಕೆ ತನ್ನ ಎಸ್‍ಯುವಿ ಕಾರ್‍ನಿಂದ ಜಿಂಕೆಗೆ ಡಿಕ್ಕಿ ಹೊಡೆದಿದ್ದಳು. ಇದರಿಂದ ಗಾಯಗೊಂಡಿದ್ದ ಆ ಜಿಂಕೆಗೆ ತೀವ್ರವಾಗಿ ಗಾಯವಾಗಿತ್ತು. ಸ್ವಲ್ಪ ದೂರ ಹೋಗಿ ಬಿದ್ದಿದ್ದ ಜಿಂಕೆ ಮೇಲೆದ್ದು ಬಂದು ಮಹಿಳೆಯ ಮೇಲೆರಗಿ ತನ್ನ ನೋವನ್ನ ವ್ಯಕ್ತಪಡಿಸಿದೆ.
ಈ ದೃಶ್ಯಗಳು ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಪೊಲೀಸರ ಗಸ್ತು ವಾಹನದ ಡ್ಯಾಶ್‍ಕ್ಯಾಮ್‍ನಲ್ಲಿ ಸೆರೆಯಾಗಿದೆ. ಎಲೆನ್ ಪೊಲೀಸರೊಂದಿಗೆ ಮಾತನಾಡಲು ಕಾರ್ ಬಾಗಿಲು ತೆಗೆದು ಕೆಳಗಿಳಿಯಲು ಮುಂದಾದಾಗ ಜಿಂಕೆ ಆಕೆಯ ಮೇಲೆರಗಿ ತನ್ನ ಕೋಪ ಹೊರಹಾಕಿದೆ. ನಂತರ ಎಲೆನ್ ಜಿಂಕೆಯನ್ನು ತಳ್ಳಿ ಮತ್ತೆ ಕಾರ್ ಬಾಗಿಲು ಹಾಕಿಕೊಳ್ಳುವುದನ್ನ ವಿಡಿಯೋದಲ್ಲಿ ನೋಡಬಹುದು.
ಈ ಘಟನೆಯಲ್ಲಿ ಎಲೆನ್‍ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಿಂಕೆಗೆ ತೀವ್ರವಾಗಿ ಪೆಟ್ಟಾಗಿದೆ.