ಬೆಂಗಳೂರು: ಶುಕ್ರವಾರ ಬಿಡುಗಡೆಯಾಗಿದ್ದ ದೊಡ್ಮನೆ ಹುಡುಗ ಸಿನಿಮಾ ಮೊದಲ ದಿನ ಒಟ್ಟು 6.38 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಕರ್ನಾಟಕದಾದ್ಯಂತ ಒಟ್ಟು 408 ಚಿತ್ರಮಂದಿರಗಳಲ್ಲಿ ದೊಡ್ಮನೆ ಹುಡುಗ ಸಿನಿಮಾ ರಿಲೀಸ್ ಆಗಿತ್ತು. ಮೊದಲ ದಿನ ಕರ್ನಾಟಕದ ಮುಖ್ಯ ನಗರಗಳಲ್ಲಿ ಬಿಡುಗಡೆಯಾದ ಎಲ್ಲಾ ಥಿಯೇಟರ್‍ಗಳೂ ಹೌಸ್‍ಫುಲ್ ಆಗಿತ್ತು.
ಜೊತೆಗೆ ರಾಜ್ಯದ ಸುಮಾರು ಥಿಯೇಟರ್‍ಗಳಲ್ಲಿ 6 ಪ್ರದರ್ಶನ ಕಂಡಿತ್ತು. ಹೀಗಾಗಿ ಒಟ್ಟಾರೆಯಾಗಿ ಮೊದಲ ದಿನ ದೊಡ್ಮನೆ ಹುಡುಗ 6 ಕೋಟಿ 38 ಲಕ್ಷ ಬಾಕ್ಸ್‍ಆಫೀಸ್ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ತಿಳಿಸಿದೆ. ಬಳ್ಳಾರಿ 22 ಪ್ರದರ್ಶನ, ದಾವಣಗೆರೆಯಲ್ಲಿ 12 , ಮೈಸೂರು 25, ಮಂಡ್ಯ 10 ಪ್ರದರ್ಶನ ಕಂಡಿತ್ತು. ಮೊದಲ ದಿನ ಈ ಎಲ್ಲಾ ಥಿಯೇಟರ್‍ಗಳೂ ಹೌಸ್‍ಫುಲ್ ಆಗಿತ್ತು.
ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅವರ 25 ಚಿತ್ರವಾದರೆ, ಅಪ್ಪು ಮತ್ತು ಸೂರಿ ನಿರ್ದೇಶನದಲ್ಲಿ ಮೂಡಿ ಬಂದ ಮೂರನೇ ಸಿನಿಮಾ. ರಾಧಿಕಾ ಪಂಡಿತ್, ಅಂಬರೀಷ್, ರವಿಶಂಕರ್, ಅವಿನಾಶ್, ರಂಗಾಯಣ ರಘು ಅಭಿನಯಿಸಿದ್ದಾರೆ.