ಬೆಂಗಳೂರು: ಹೆತ್ತ ತಾಯಿಯೇ ತನ್ನಿಬ್ಬರು ಮಕ್ಕಳನ್ನ ಗೃಹ ಬಂಧನದಲ್ಲಿಟ್ಟು ಚಿತ್ರಹಿಂಸೆ ನೀಡುತ್ತಿದ್ದ ಘಟನೆ ಬೆಂಗಳೂರಿನ ಗಂಗಮ್ಮನಗುಡಿ ಠಾಣಾ ವ್ಯಾಪ್ತಿಯ ಕಾಶಿಂಪುರದಲ್ಲಿ ನಡೆದಿದೆ.
ಮಂಜುಳಾ ಕಿರುಕುಳ ನೀಡಿದ ತಾಯಿ. ಮೂರ್ನಾಲ್ಕು ತಿಂಗಳ ಹಿಂದೆ ಏರಿಯಾದಲ್ಲಿ ಬಾಡಿಗೆ ಮನೆ ಪಡೆದು ಬಂದ ಈಕೆ ತನ್ನ ಇಬ್ಬರು ಮಕ್ಕಳಾದ ಸಂತೋಷ್ ಮತ್ತು ಮೊನಿಷಾಳನ್ನ ಮನೆ ಒಳಗೆ ಕೂಡಿ ಹಾಕಿ ಕೆಲಸಕ್ಕೆ ಹೋಗ್ತಿದ್ದರು. ಮಕ್ಕಳು ಹಸಿವು ತಾಳಲಾರದೆ ಕಿಟಕಿ ತೆರೆದು ಅಕ್ಕಪಕ್ಕದವರ ಬಳಿ ಏನಾದ್ರು ತಿನ್ನಲು ಕೇಳುತ್ತಿದ್ದವು. ಈ ವಿಷಯ ತಿಳಿದು ಕಿಟಕಿ ತೆಗೆದದ್ದು ಯಾಕೆ ಅಂತ ಈ ಮಹಾತಾಯಿ ತನ್ನಿಬ್ಬರು ಮಕ್ಕಳ ಕೈ ಮತ್ತು ಮುಖವನ್ನ ಸುಟ್ಟಿದ್ದಾಳೆ.
ಅಲ್ಲದೆ ಈಕೆ ಬೆಳಗ್ಗೆ ಮನೆ ಬಿಟ್ಟು ಹೋದ್ರೆ ರಾತ್ರಿ ಮನೆ ಸೇರ್ತಿದ್ದಳು. ಅಲ್ಲಿವರೆಗೂ ಮಕ್ಕಳು ಹಸಿವು ತಾಳಲಾರದೆ ಅಳ್ತಿದ್ವು. ಇದನ್ನೆಲ್ಲಾ ನೋಡಿ ಕೊನೆಗೆ ಅಕ್ಕಪಕ್ಕದ ನಿವಾಸಿಗಳು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ರು.
ಇಂದು ಮಾನವ ಹಕ್ಕುಗಳ ಆಯೋಗದ ಮೀರಾ ಸಕ್ಸೇನಾ ನೇತೃತ್ವದ ತಂಡ ಮಂಜುಳಾ ಮನೆ ಮೇಲೆ ದಾಳಿ ನಡೆಸಿ ಮಹಿಳೆಗೆ ಎಚ್ಚರಿಕೆ ಕೊಟ್ಟಿದೆ. ಈ ಮಹಿಳೆ ಕೆಲ ದಿನಗಳಲ್ಲಿ ಮಕ್ಕಳನ್ನ ಹಾಸ್ಟೆಲ್‍ಗೆ ಸೇರಿಸೋದಾಗಿ ಹೇಳಿಕೆ ಕೊಟ್ಟಿದ್ದಾಳೆ.
ಈ ಬಗ್ಗೆ ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
The post ಹೆತ್ತ ತಾಯಿಯಿಂದಲೇ ಮಕ್ಕಳನ್ನ ಗೃಹ ಬಂಧನದಲ್ಲಿಟ್ಟು ಚಿತ್ರಹಿಂಸೆ appeared first on Public TV.