Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80365

ಕಾವೇರಿ ವಿವಾದ: ಕಾನೂನು ತಜ್ಞರು ಸಿಎಂಗೆ ನೀಡಿದ ಸಲಹೆಗಳು

$
0
0

ಬೆಂಗಳೂರು: ಕಾವೇರಿ ವಿಚಾರವಾಗಿ ಕಾನೂನು ತಜ್ಞರ ಜೊತೆ ಗೃಹ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಗುರುವಾರ ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಎರಡು ರಾಜ್ಯಗಳ ಕಾವೇರಿ ಕಣಿವೆಯ ಪ್ರದೇಶಗಳಲ್ಲಿ ವಾಸ್ತವ ಸ್ಥಿತಿ ಪರಿಶೀಲನೆ ನಡೆಸಲು ಸಮಿತಿ ಕಳಿಸುವ ಕುರಿತು ಮೊದಲ ಆದ್ಯತೆ ನೀಡಬೇಕು. ರಾಜ್ಯಕ್ಕೆ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಕೋರ್ಟ್‍ಗೆ ಮನವರಿಕೆ ಮಾಡಿಕೊಡಬೇಕೆಂದು ಕಾನೂನು ತಜ್ಞರು ಸಲಹೆ ನೀಡಿದರು.

ಕಾವೇರಿ ಮೇಲುಸ್ತುವಾರಿ ಸಮಿತಿ ಮುಂದೆ ಸಮರ್ಥವಾಗಿ ವಾದ ಮಂಡಿಸುವುದು. ಪರಿಣಿತರ ಅಧ್ಯಯನ ತಂಡವನ್ನು ರಾಜ್ಯಕ್ಕೆ ಕಳುಹಿಸುವಂತೆ ಮನವಿ ಮಾಡುವುದರ ಬಗ್ಗೆ ಗಹನವಾದ ಚರ್ಚೆ ನಡೆಯಿತು.

ಸಭೆಯಲ್ಲಿ ಭಾಗವಹಿಸಿದವರು: ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ರಾಜೇಂದ್ರಬಾಬು, ರಾಮಾಜೊಯಿಸ್, ವಿಶ್ವನಾಥಶೆಟ್ಟಿ, ಕುಮಾರ್, ಎ.ಜೆ.ಸದಾಶಿವ, ನಿವೃತ್ತ ಅಡ್ವಕೇಟ್ ಜನರಲ್‍ಗಳಾದÀ ಬಿ.ವಿ.ಆಚಾರ್ಯ, ಅಶೋಕ್ ಹಾರನಹಳ್ಳಿ, ಪೆÇ್ರ.ರವಿವರ್ಮಕುಮಾರ್, ಸಚಿವರಾದ ಟಿ.ಬಿ.ಜಯಚಂದ್ರ, ಎಂ.ಬಿ.ಪಾಟೀಲ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್, ಅಡ್ವೊಕೇಟ್ ಜನರಲ್ ಮಧುಸೂದನ ನಾಯಕ, ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಸುಪ್ರೀಂ ಕೋರ್ಟ್ ವಕೀಲ ಮೋಹನ ಕಾತರಕಿ ಅಡ್ವಕೇಟ್ ಜನರಲ್ ಮಧುಸೂದನ್ ನಾಯಕ್, ಹೆಚ್ಚುವರಿ ಅಡ್ವಕೇಟ್ ಜನರಲ್ ಪೊನ್ನಣ್ಣ ಭಾಗವಹಿಸಿದ್ದರು.

ಪ್ರಧಾನಿ ಮಧ್ಯ ಪ್ರವೇಶ ಸೇರಿದಂತೆ ಮುಂದಿನ ಹೋರಾಟದ ಬಗ್ಗೆ ಸಿಎಂಗೆ ಕಾನೂನು ತಜ್ಞರ ಸಭೆಯಲ್ಲಿ ನೀಡಿದ ಸಲಹೆ ಇಲ್ಲಿದೆ.

ಕಾವೇರಿ ವಿಚಾರದಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಸಿಎಂಗೆ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯನ್ಯಾಯಮೂರ್ತಿಗಳು ಸ್ಪಷ್ಟನೆ ನೀಡಿದರು. ಕಾವೇರಿ ನ್ಯಾಯಾಧೀಕರಣ ಆದೇಶದಲ್ಲೇ ಇದಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಎರಡೇ ರಾಜ್ಯಗಳು ಮಾತುಕತೆ ಮೂಲಕ ನೀರು ಹಂಚಿಕೆಯಲ್ಲಿ ಒಮ್ಮತಕ್ಕೆ ಬರಬಹುದು. ದೇಶದ ಪ್ರಧಾನಿ ಎರಡು ರಾಜ್ಯಗಳ ಮಧ್ಯಸ್ಥಿಕೆ ವಹಿಸಿದರೆ ಅದು ಕಾನೂನು ಉಲ್ಲಂಘನೆಯಾಗುವುದಿಲ್ಲ. ಕಾನೂನಿನಲ್ಲಿ ಅವಕಾಶ ಇಲ್ಲ ಎಂಬ ಬಿಜೆಪಿ ನಾಯಕರ ವಾದ ಸರಿಯಲ್ಲ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಅಂಕಿ ಸಂಖ್ಯೆಗಳ ಸಮೇತ ಸುಪ್ರೀಂಗೆ ವಾಸ್ತವ ಸ್ಥಿತಿಯನ್ನ ವಿವರಿಸಬೇಕು. ಕರ್ನಾಟಕದ ನಾಲ್ಕು ಡ್ಯಾಮ್‍ನ ನೀರನ್ನ ಒಟ್ಟಿಗೆ ಸೇರಿಸಿದ್ರೂ, ಮೆಟ್ಟೂರ್ ಡ್ಯಾಮ್ ನಲ್ಲಿರುವ ನೀರಿಗೆ ಸಮವಾಗುವುದಿಲ್ಲ. 42 ಟಿ.ಎಂಸಿ ನೀರು ತಮಿಳುನಾಡಿನ ಮೆಟ್ಟೂರ್ ಡ್ಯಾಮ್ ನಲ್ಲಿದೆ ಇದು ಸಾಂಬಾ ಬೆಳೆಗೆ ಸಾಕಾಗುತ್ತದೆ. ತಮಿಳುನಾಡು ನೀರು ಕೇಳುತ್ತಿರುವುದು ಭವಿಷ್ಯದ ಸಂಗ್ರಹಕ್ಕೆ, ರಾಜ್ಯಕ್ಕೆ ಪ್ರಸ್ತುತದಲ್ಲಿ ಕುಡಿಯಲು ನೀರಿಲ್ಲ. ರಾಜ್ಯದ ರೈತರಿಗೆ ಮೊದಲ ಬೆಳೆಗೆ ನೀರಲ್ಲ ಎನ್ನುವುದುನ್ನು ಸುಪ್ರೀಂಗೆ ಮನವರಿಕೆ ಮಾಡಿಕೊಡಿ ಎಂದು ತಿಳಿಸಿದರು.

ನೀರು ಬಿಡುವುದದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿದೆ ಎನ್ನುವುದು ಸರಿಯಲ್ಲ. ವಾಸ್ತವ ಸ್ಥಿತಿ ಪರಿಶೀಲಿಸಲು ಮೇಲುಸ್ತುವಾರಿ ಸಮಿತಿಯನ್ನು ಕಳುಹಿಸಿಲು ಪ್ರಭಲ ವಾದ ಮಂಡಿಸಿ. ತಮಿಳುನಾಡಿನ ಕಾವೇರಿ ಕಣಿವೆಯ ನಾಲ್ಕು ಜಿಲ್ಲೆಗಳಲ್ಲಿ 16 ಅಡಿಗೆ ಗ್ರೌಂಡ್ ವಾಟರ್ ಸಿಗಲಿದೆ. ರಾಜ್ಯದ ಕಾವೇರಿ ಕಣಿವೆಯ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆಯನ್ನ ತಿಳಿಸಿ. ತಮಿಳುನಾಡಿಗೆ ಇಲ್ಲದ ಕುಡಿಯುವ ನೀರಿನ ಸಮಸ್ಯೆ ರಾಜ್ಯದಲ್ಲಿರುವುದನ್ನು ಮನವರಿಕೆ ಮಾಡಿಕೊಡಿ ಎಂದು ಸಲಹೆ ನೀಡಿದರು.

 

The post ಕಾವೇರಿ ವಿವಾದ: ಕಾನೂನು ತಜ್ಞರು ಸಿಎಂಗೆ ನೀಡಿದ ಸಲಹೆಗಳು appeared first on Kannada Public tv.


Viewing all articles
Browse latest Browse all 80365

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>