Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80375

ಫಸ್ಟ್ ಟೈಂ: ದಸರಾಗೆ ಅರಮನೆ ನಗರಿಯಲ್ಲಿ ಸಂಚರಿಸಲಿದೆ ಸುವರ್ಣರಥ –ಟಿಕೆಟ್ ಬೆಲೆ ಎಷ್ಟು ಗೊತ್ತಾ?

$
0
0

ಮೈಸೂರು: ಈ ಬಾರಿ ಅರಮನೆ ನಗರಿಗೆ ಅರಮನೆಯಂತ ರೈಲು ಬರುತ್ತಿದೆ. ಹೌದು, ಇದೇ ಮೊದಲ ಬಾರಿಗೆ ಸುವರ್ಣರಥ ಅರ್ಥಾತ್ ಗೋಲ್ಡನ್ ಚಾರಿಯಟ್ ನಾಡಹಬ್ಬಕ್ಕಾಗಿ ಮೈಸೂರಿನಲ್ಲಿ ಸಂಚರಿಸಲಿದೆ.

ಅಕ್ಟೋಬರ್ 1, 3, 5, 7 ಮತ್ತು 9ರಂದು ಬೆಂಗಳೂರಿನ ಯಶವಂತಪುರ ನಿಲ್ದಾಣದಿಂದ ಗೋಲ್ಡನ್ ಚಾರಿಯಟ್ ಹೊರಡಲಿದೆ. ಮೈಸೂರು ಮತ್ತು ಅಲ್ಲಿಂದ ಶ್ರೀರಂಗಪಟ್ಟಣಕ್ಕೆ ತೆರಳಲಿದೆ. ದರಿಯಾ ದೌಲತ್, ಟಿಪ್ಪು ಮ್ಯೂಸಿಯಂ, ಜಗಮನೋಹನ ಅರಮನೆ, ಲಲಿತ್ ಮಹಲ್ ಅರಮನೆಯನ್ನು ವೀಕ್ಷಿಸಬಹುದಾಗಿದೆ. ಅವತ್ತು ರಾತ್ರಿ ರೈಲಿನಲ್ಲಿ ಊಟ ಮಾಡಿ ಪ್ರಯಾಣಿಕರು ಬೆಂಗಳೂರಿಗೆ ಮರಳಬಹುದು.

golden-cahriot

ಟಿಕೆಟ್ ಬೆಲೆ ಎಷ್ಟು?: ಈಗಾಗಲೇ ಆನ್‍ಲೈನ್ ಮೂಲಕ ಗೋಲ್ಡನ್ ಚಾರಿಯಟ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಈ ಐಷಾರಾಮಿ ರೈಲಿನಲ್ಲಿ ಎರಡು ರಾತ್ರಿ ಮತ್ತು ಒಂದು ದಿನ ಕಳೆಯಬಹುದು. ಕೊಡ್ಬೇಕಾಗಿರುವ ಕಾಸು ಒಬ್ಬರಿಗೆ 30 ಸಾವಿರ ರೂಪಾಯಿ. ಈ ರೈಲಲ್ಲಿ 44 ಲಕ್ಷುರಿ ಕ್ಯಾಬಿನ್‍ಗಳಿದ್ದು 88 ಪ್ರಯಾಣಿಕರಷ್ಟೇ ಹೋಗಬಹುದು.

2008ರಲ್ಲಿ ಕರ್ನಾಟಕ ಪ್ರವಾಸೋದ್ಯಮ ನಿಗಮ ಮತ್ತು ರೈಲ್ವೆ ಸಚಿವಾಲಯದ ಜಂಟಿ ಸಹಭಾಗಿತ್ವದಲ್ಲಿ ದಕ್ಷಿಣ ಭಾರತದಲ್ಲಿ ಅತ್ಯಂತ ದುಬಾರಿಯಾಗಿರುವ ಗೋಲ್ಡನ್ ಚಾರಿಯಟ್ ರೈಲು ಸೇವೆಯನ್ನು ಆರಂಭಿಸಲಾಗಿತ್ತು.

 

The post ಫಸ್ಟ್ ಟೈಂ: ದಸರಾಗೆ ಅರಮನೆ ನಗರಿಯಲ್ಲಿ ಸಂಚರಿಸಲಿದೆ ಸುವರ್ಣರಥ – ಟಿಕೆಟ್ ಬೆಲೆ ಎಷ್ಟು ಗೊತ್ತಾ? appeared first on Kannada Public tv.


Viewing all articles
Browse latest Browse all 80375

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ