ಲಂಡನ್: ಮಾಲೀಕರು ಚೆಂಡನ್ನ ದೂರಕ್ಕೆ ಎಸೆದರೆ ಓಡಿಹೋಗಿ ಆ ಚೆಂಡನ್ನ ಬಾಯಲ್ಲಿ ಕಚ್ಚಿ ತರುವ ನಾಯಿಗಳನ್ನ ನೋಡಿದ್ದೀವೆ. ಆದರೆ ಇಲ್ಲೊಂದು ನಾಯಿ ಫುಟ್‍ಬಾಲ್ ಚೆಂಡಿನಲ್ಲಿ ಆಟವಾಡುತ್ತಾ ನೋಡುಗರ ಹುಬ್ಬೇರುವಂತೆ ಮಾಡಿದೆ.
ಇಂಗ್ಲೆಂಡಿನ ಚೆಲ್ಟೆನ್‍ಹ್ಯಾಮ್ ನಗರದ ಪೀಟರ್ ಸಿಂಪ್ಕಿನ್ಸ್ ಎಂಬವರ ಸಾಕುನಾಯಿ ಆಲ್ಫಿ ಫುಟ್‍ಬಾಲ್ ಆಡೋದ್ರಲ್ಲಿ ತನ್ನ ಪ್ರತಿಭೆಯನ್ನ ತೋರಿಸಿ ಈಗ ಯೂಟ್ಯೂಬ್ ಸ್ಟಾರ್ ಆಗಿದೆ.
ಒಮ್ಮೆ ಇದರ ಮುಂದೆ ಚೆಂಡು ಇಟ್ಟರೆ ಸಾಕು, ಅದನ್ನ ಗಿರ್ರನೆ ತಿರುಗಿಸುತ್ತಾ, ಕಾಲಿನಿಂದ ತಲೆಗೇರಿಸಿ ಬೌನ್ಸ್ ಮಾಡುತ್ತಾ ಡ್ರಿಬ್ಲಿಂಗ್ ಮಾಡುತ್ತಾ ಆಟವಾಡುತ್ತೆ. ಪೀಟರ್ ಅವರ ಮನೆಯ ಅಕ್ಕಪಕ್ಕದವರು ಈ ನಾಯಿಯ ಪ್ರತಿಭೆ ನೋಡಿ ಫಿದಾ ಆಗಿದ್ದು, ಫುಟ್‍ಬಾಲ್ ಚಾಂಪಿಯನ್ ರೋನಾಲ್ಡೋ ಅವರ ಹೆಸರನ್ನ ಆಲ್ಫಿಗೆ ಇಟ್ಟು ಈ ನಾಯಿಯನ್ನ ರೊನಾಲ್ಡಾಗ್ ಅಂತ ಕರೀತಾರೆ.
The post ಫುಟ್‍ಬಾಲ್ ಆಡೋ ನಾಯಿಯ ಟ್ಯಾಲೆಂಟ್ ನೋಡಿ! appeared first on Public TV.