ಲಂಡನ್: ಶಾಪಿಂಗ್ ಮಾಲ್‍ಗೆ ಹೋದ್ರೆ ಗ್ರಾಹಕರಿಗೆ ವಸ್ತುಗಳನ್ನ ಇಟ್ಟುಕೊಳ್ಳಲು ಟ್ರಾಲಿ ಕೊಡ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತುಇ ಅದೇ ಟ್ರಾಲಿಯನ್ನ ಮೋಟರ್ ಸೈಕಲ್ ಮಡಿಕೊಂಡಿದ್ದಾರೆ.
ಹೌದು. ವಸ್ತುಗಳನ್ನ ತೆಗೆದುಕೊಂಡು ಹೋಗುವ ಟ್ರಾಲಿ ಈಗ ಮೋಟರ್‍ಸೈಕಲ್ ಆಗಿ ಪರಿವರ್ತನೆಯಾಗಿದ್ದು, ಗಂಟೆಗೆ ಬರೋಬ್ಬರಿ 80 ಕಿಮೀ ವೇಗವಾಗಿ ಚಲಿಸುತ್ತದೆ ಅಂದ್ರೆ ನೀವು ನಂಬ್ಲೇಬೇಕು.
ವಿಶೇಷತೆ ಏನು?: ಇಂಗ್ಲೆಂಡ್‍ನ ಕೌಂಟಿ ವೋರ್ಸ್‍ಸ್ಟೇರ್ ಮೋಟಾರಿಸ್ಟ್ ವಾಕಿ ಮ್ಯಾಟ್ ಮ್ಯಾಕ್‍ಕೌನ್ ಈ ಅಪರೂಪದ ಮೋಟರ್ ಸೈಕಲ್ ತಯಾರಿಸಿದ್ದು, ಟ್ರಾಲಿ ಮೋಟರ್‍ಸೈಕಲ್‍ಗೆ ಜೆಟ್‍ನಲ್ಲಿ ಇರುವ ಇಂಜಿನ್ ಬಳಸಿದ್ದು, ಅದರ ಮೇಲೆ ಟ್ರಾಲಿ ಫಿಕ್ಸ್ ಮಾಡಿ ಅದಕ್ಕೆ ಬೈಕ್‍ನಂತೆ ಹ್ಯಾಂಡಲ್ ನಾಲ್ಕು ಚಕ್ರಗಳನ್ನ ಅಳವಡಿಸಿದ್ದಾರೆ. ಈ ವೇಗದ ಮೋಟರ್ ಸೈಕಲ್ ತಯಾರಿಸಿದ್ದು, ಪೆಟ್ರೋಲ್ ಬಳಸಿ ಚಲಾಯಿಸುತ್ತಾರೆ.
ಮೊದಲಿಗೆ ಮ್ಯಾಟ್ ಒಂದು ಗಂಟೆ ಸಮಯಕ್ಕೆ 45.5 ಕಿಮೀ ಕ್ರಮಿಸಿದ್ದರು, ಇದಾದ ಬಳಿಕ ಮೋಟರ್ ಸೈಕಲ್‍ನಲ್ಲಿ ಬರೋಬ್ಬರಿ 71.4 ಕಿಮೀ ದಾಟಿದ್ದು, 80 ಕಿಮೀ ಗಿಂತಲೂ ಹೆಚ್ಚು ವೇಗವಾಗಿ ಓ ಮೋಟರ್ ಸೈಕಲ್ ಓಡಿಸಬಹುದೆಂದು ಅಭಿಪ್ರಾಯಪಟ್ಟಿದ್ದಾರೆ.
The post ಟ್ರಾಲಿ ನಿರ್ಮಿತ ಮೋಟರ್‍ಸೈಕಲ್ ಗಂಟೆಗೆ 80 ಕಿಮೀ ಚಲಿಸುತ್ತೆ! appeared first on Kannada Public tv.