ಭೋಪಾಲ್: ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶವಸಂಸ್ಕಾರಕ್ಕೆ ಹಣವಿಲ್ಲದೇ ಕಸದಲ್ಲೇ ಆಕೆಯನ್ನ ಸುಟ್ಟು ಹಾಕಿದ ದಾರುಣ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಹೌದು. ಬುಡಕಟ್ಟು ಜನಾಂಗದ ವ್ಯಕ್ತಿ ಜಗದೀಶ್ ಬೀಲ್, ಬೀಲ್ ಸಮುದಾಯಕ್ಕೆ ಸೇರಿದ್ದು, ಇವರ ಪತ್ನಿ ನೇಜಿ ಬಾಯ್(67) ಕಳೆದ ಶುಕ್ರವಾರ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಮೊದಲೇ ಬಡತನದಿಂದ ಕಂಗೆಟ್ಟಿದ್ದ ಜಗದೀಶ್ ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೇ ಪರದಾಡುವಂತಾಗಿತ್ತು. ಹೀಗಾಗಿ ಕಸದಿಂದಲೇ ಆಕೆಯ ಮೃತದೇಹವನ್ನ ಸುಟ್ಟು ಹಾಕಿದ್ದಾರೆ.
ಸೌದೆಗೆ ಹಣವಿರಲಿಲ್ಲ: ಮೊದಲಿಗೆ ಜಗದೀಶ್ ನಗರ ಪಾಲಿಕೆ ಬಳಿ ಶವಸಂಸ್ಕಾರಕ್ಕೆ ಸೌದೆಯ ವ್ಯವಸ್ಥೆ ಮಾಡುವಂತೆ ಬೇಡಿಕೊಂಡಿದ್ದಾರೆ. ಆದರೆ ಅಲ್ಲಿ 2.5 ಸಾವಿರ ರೂ. ನೀಡಿದರೆ ಮಾತ್ರ ಸೌದೆ ನೀಡುವುದಾಗಿ ಹೇಳಿದ್ದಾರೆ. ಇದಾದ ಬಳಿಕ ಕೌನ್ಸಿಲರ್ ಬಳಿಯೂ ಹೋಗಿದ್ದಾರೆ ಅಲ್ಲೂ ಯಾವುದೇ ಸಹಾಯ ದೊರೆತಿಲ್ಲ.
ಬರೋಬ್ಬರಿ 12 ಗಂಟೆಯಾದರೂ ಶವಸಂಸ್ಕಾರ ಮಾಡಲು ಪರದಾಡಿದ ಜಗದೀಶ್ ಕುಟುಂಬ ಸದಸ್ಯರು. ನೇಜಿ ಬಾಯ್ ಮೃತದೇಹವನ್ನ, ಟಯರ್, ಪ್ಲಾಸ್ಟಿಕ್ ಬ್ಯಾಗ್ ಸೇರಿದಂತೆ ಕಸದಿಂದ ಅಂತ್ಯಸಂಸ್ಕಾರ ಮಾಡಿದ್ದಾರೆ.
The post ಸೌದೆಗೆ ಹಣವಿಲ್ಲದೇ ಟಯರ್, ಪ್ಲಾಸ್ಲಿಕ್, ಕಸದಿಂದ ಪತ್ನಿಯ ಅಂತ್ಯಕ್ರಿಯೆ ಮಾಡಿದ! appeared first on Kannada Public tv.