ಗೌರಿ ಹಬ್ಬ ವಿಶೇಷವಾಗಿ ಹೆಣ್ಣು ಮಕ್ಕಳ ಹಬ್ಬ. ಸಂಭ್ರಮ ಸಡಗರದ ಈ ಹಬ್ಬಕ್ಕೆ ಸಿಹಿ ಹೂರಣದ ಕಾಯಿ ಹೋಳಿಗೆ ಮಾಡಿ ಸವಿದರೆ ಹೇಗೆ? ಅದಕ್ಕಾಗಿ ಇಲ್ಲಿದೆ ಕಾಯಿ ಹೋಳಿಗೆ ಮಾಡೋ ಸಿಂಪಲ್ ವಿಧಾನ.
ಬೇಕಾಗುವ ಸಾಮಗ್ರಿಗಳು:
1. ಮೈದಾಹಿಟ್ಟು – 1 1/2 ಕಪ್
2. ಚಿರೋಟಿ ರವೆ – 1 ಕಪ್
3. ಅರಿಶಿಣ – ಸ್ವಲ್ಪ
4. ತೆಂಗಿನ ಕಾಯಿ ತುರಿ- 2 ಕಪ್
5. ಬೆಲ್ಲ- 1 1/2 ಕಪ್
6. ಗಸಗಸೆ- 1/2 ಚಮಚ
7. ಏಲಕ್ಕಿ – 5
8. ಎಣ್ಣೆ- 1 ಕಪ್
ಮಾಡುವ ವಿಧಾನ
ಕಣಕ:
* ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಅರಿಶಿಣ ಮತ್ತು ಚಿರೋಟಿ ರವೆ ಹಾಕಿ ಅಗತ್ಯವಿರುವಷ್ಟು ನೀರು (ಹಿಟ್ಟು ಗಟ್ಟಿಯಾಗದಂತೆ ಹೆಚ್ಚಿಗೆ ನೀರು ಹಾಕಿ) ಚೆನ್ನಾಗಿ ಕಲಸಿ.
* ನಂತರ ಅರ್ಧ ಕಪ್ ಎಣ್ಣೆ ಹಾಕಿ ಚೆನ್ನಾಗಿ ನಾದಿಕೊಂಡು ಇದರ ಮೇಲೆ ಒಂದು ಪ್ಲಾಸ್ಟಿಕ್ ಕವರ್ ಅಥವಾ ತಟ್ಟೆಯನ್ನು ಮುಚ್ಚಿ 1 ಗಂಟೆ ನೆನೆಯಲು ಬಿಡಿ.
ಹೂರಣ:
* ಮಿಕ್ಸಿ ಜಾರ್‍ಗೆ ತೆಂಗಿನಕಾಯಿ ತುರಿ ಹಾಕಿ ನೀರು ಹಾಕದೆ ಒಂದು ರೌಂಡ್ ತರಿತರಿಯಾಗಿ ರುಬ್ಬಿಕೊಳ್ಳಿ.
* ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಪುಡಿ ಮಾಡಿದ ಬೆಲ್ಲ ಮತ್ತು ನೀರು ಹಾಕಿ ಕರಗಿಸಿ.
* ಬೆಲ್ಲದಲ್ಲಿ ಕಸ ಇದ್ದರೆ ಸೋಸಿಕೊಳ್ಳಿ.
* ನಂತರ ಇದಕ್ಕೆ ರುಬ್ಬಿಕೊಂಡ ತೆಂಗಿನಕಾಯಿ ತುರಿ ಹಾಕಿ ನೀರಿನ ಅಂಶ ಹೋಗುವವರೆಗೆ ತಿರುಗಿಸುತ್ತಿರಿ.
* ಕೊನೆಯಲ್ಲಿ ಪುಡಿ ಮಾಡಿದ ಏಲಕ್ಕಿ ಮತ್ತು ಗಸಗಸೆ ಹಾಕಿ ಮಿಕ್ಸ್ ಮಾಡಿ ತಣ್ಣಗಾಗಲು ಬಿಡಿ.
ಹೋಳಿಗೆ:
* ನೆನೆಸಿಟ್ಟ ಮೈದಾ ಹಿಟ್ಟನ್ನು ಮತ್ತೊಮ್ಮೆ ಚೆನ್ನಾಗಿ ನಾದಿಕೊಳ್ಳಿ.
* ಒಂದು ಮಣೆ ಮೇಲೆ ಪ್ಲಾಸ್ಟಿಕ್ ಕವರ್ ಅಥವಾ ಬಾಳೆ ಎಲೆ ಹರಡಿ, ಸ್ವಲ್ಪ ಮೈದಾ ಹಿಟ್ಟಿನ ಮಿಶ್ರಣವನ್ನು ತೆಗೆದುಕೊಂಡು ತಟ್ಟಿಕೊಳ್ಳಿ.
* ಸ್ವಲ್ಪ ಹೂರಣ ತೆಗೆದುಕೊಂಡು ಉಂಡೆ ಮಾಡಿ, ತಟ್ಟಿಕೊಂಡಿರುವ ಮೈದಾ ಮಿಶ್ರಣದ ಮಧ್ಯ ಭಾಗದಲ್ಲಿ ಇಟ್ಟು ಹೂರಣ ಮುಚ್ಚುವಂತೆ ಎಲ್ಲಾ ಕಡೆಯಿಂದ ಮಡಚಿಕೊಳ್ಳಿ.
* ಪ್ಯಾನ್ ಬಿಸಿಗಿಟ್ಟು ಅದರ ಮೇಲೆ ಒಂದು ಚಮಚ ತುಪ್ಪ ಅಥವಾ ಎಣ್ಣೆ ಹಾಕಿ.
* ಹೂರಣ ತುಂಬಿದ ಮೈದಾ ಉಂಡೆಯನ್ನು ಅಗಲವಾಗಿ ತಟ್ಟಿಕೊಂಡು ಪ್ಯಾನ್ ಮೇಲೆ ಹಾಕಿ ಎರಡೂ ಬದಿ ಬೇಯಿಸಿ ತೆಗೆದರೆ ಕಾಯಿ ಹೋಳಿಗೆ ರೆಡಿ.
The post ಗೌರಿ ಹಬ್ಬದ ವಿಶೇಷ: ಕಾಯಿ ಹೋಳಿಗೆ ಮಾಡೋ ವಿಧಾನ appeared first on Kannada Public tv.