ಮಂಡ್ಯ: ಇಂದು ಮಂಡ್ಯದಲ್ಲಿ ಜಾಗ್ವಾರ್ ಸಿನಿಮಾದ ಹಾಡುಗಳು ಬಿಡುಗಡೆ ಆಗಲಿವೆ. ಸ್ಯಾಂಡಲ್‍ವುಡ್ ಇತಿಹಾಸದಲ್ಲೇ ಅದ್ಧೂರಿ ಆಡಿಯೋ ರಿಲೀಸ್ ಆಗ್ತಿದೆ. ಲಹರಿ ಸಂಸ್ಥೆ ಈ ಚಿತ್ರದ ಹಾಡುಗಳನ್ನು ದಾಖಲೆಯ ಮೊತ್ತಕ್ಕೆ ಕೊಂಡುಕೊಂಡಿದೆ.
ನಿಖಿಲ್ ಗೌಡ ಅಭಿನಯದ ಜಾಗ್ವಾರ್ ಚಿತ್ರದ ಆಡಿಯೋ ಇಂದು ಸಂಜೆ ಅದ್ಧೂರಿ ಕಾರ್ಯಕ್ರಮದಲ್ಲಿ ರಿಲೀಸ್ ಆಗಲಿವೆ. ಮಂಡ್ಯದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ವೇದಿಕೆ ನಿರ್ಮಾಣವಾಗಿದ್ದು, ನಗರದಾದ್ಯಂತ ಎಲ್ಲೆಲ್ಲೂ ಜಾಗ್ವಾರ್ ಚಿತ್ರದ ಪೋಸ್ಟರ್ ರಾರಾಜಿಸುತ್ತಿವೆ. ಇಲ್ಲಿಯವರೆಗೂ ಯಾರೂ ಮಾಡಿರದಂತ ರೀತಿಯಲ್ಲಿ ಸಾಂಗ್ ರಿಲೀಸ್‍ಗೆ ನಿರ್ಮಾಪಕ ಎಚ್ ಡಿ ಕುಮಾರಸ್ವಾಮಿ ಸಿದ್ಧತೆ ನಡೆಸಿದ್ದಾರೆ.
ಸಂಜೆ 5.30ಕ್ಕೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಅರುಣ್ ಸಾಗರ್ ಹಾಗೂ ಶಾಲಿನಿ ನಡೆಸಿಕೊಡಲಿದ್ದಾರೆ. ಕಲರ್‍ಫುಲ್ ಸೆಟ್ 150ಕ್ಕೂ ಹೆಚ್ಚು ಡ್ಯಾನ್ಸರ್‍ಗಳು ಹೆಜ್ಜೆ ಹಾಕಲಿದ್ದಾರೆ. ಇದಕ್ಕಾಗಿಯೇ ಕೋರಿಯೋಗ್ರಾಫರ್ ಹರ್ಷ ಡೈರೆಕ್ಷನ್‍ನಲ್ಲಿ ನೃತ್ಯ ತಾಲೀಮು ನಡೆದಿದೆ. ಗಾಯಕರಾದ ವಿಜಯ್ ಪ್ರಕಾಶ್, ಶಮಿತಾ ಶೆಟ್ಟಿ ಹಾಗೂ ಚಂದನ್ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.
The post ಇಂದು ಮಂಡ್ಯದಲ್ಲಿ ಅದ್ಧೂರಿಯಾಗಿ ಜಾಗ್ವಾರ್ ಆಡಿಯೋ ರಿಲೀಸ್ appeared first on Kannada Public tv.