ಮೈಸೂರು: ನಟ ದರ್ಶನ ನಾಗರಹಾವು ಚಿತ್ರದಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇಂದು ನಗರದಲ್ಲಿ ಚಿತ್ರದ ಟೈಟಲ್ ಸಾಂಗ್‍ಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಇದೇ ವೇಳೆ ರಾಜಕಾಲುವೆ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜರಾಜೇಶ್ವರಿ ನಗರದಲ್ಲಿ ರಾಜಕಾಲುವೆ ಒತ್ತುವರಿ ವಿಚಾರದಲ್ಲಿ ಎಲ್ಲರಿಗೂ ಒಂದೇ ನ್ಯಾಯ ಸ್ವಾಮಿ, ಒತ್ತುವರಿಯಾಗಿದ್ದರೆ, ನಾನೇ ಅಗೆದು ಕೊಟ್ಟುಬಿಡ್ತೀನಿ. ಅದೇನೂ 100*200 ಸೈಟ್ ಅಲ್ಲ, ಆ ಮನೆ 40*60 ಅಡಿ ವಿಸ್ತೀರ್ಣದ ಸೈಟು. ನಮಗೆ ಏನೂ ಗೊತ್ತಿಲ್ಲ, ಸರ್ವೇ ಮಾಡಿದ್ದಾರೆ. ಒತ್ತುವರಿಯಾಗಿದ್ದರೆ ಬಿಟ್ಟು ಕೊಡ್ತಿನಿ.
ಇದಲ್ಲದೇ ಸುಪ್ರೀಂ ಕೋರ್ಟ್‍ನಿಂದ ಬಂದಿರೋ ಆರ್ಡರ್ ಅದು, ನಮ್ಮನೆ ಆರ್ಡರ್ ಅಲ್ಲ, ಇನ್ನೊಬ್ಬರ ಮನೆ ಆರ್ಡರ್ ಕೂಡ ಅಲ್ಲ. ಕಾನೂನು ಎಲ್ಲರಿಗೂ ಒಂದೇ ಅಲ್ವಾ ಸರ್, ಹೀಗಾಗಿ ಒತ್ತವರಿಯಾಗಿದ್ದರೆ, ನ್ಯಾಯುವತವಾಗಿಯೂ ತೆರೆವು ಮಾಡಿಕೊಡುತ್ತೇವೆ ಎಂದು ದರ್ಶನ್ ಹೇಳಿದರು.
ನಾಗರಹಾವು ಚಿತ್ರದ ಟೈಟಲ್ ಸಾಂಗ್‍ನ ಮೂಲಕ ದಿವಂಗತ ನಟ ಡಾ. ವಿಷ್ಣುವರ್ಧನ್‍ಗೆ ಗೌರವ ಸಲ್ಲಿಸುತ್ತಿದೆ ಚಿತ್ರತಂಡ. ಸದ್ಯ ದರ್ಶನ್ ಸಾಂಗ್ ಶೂಟಿಂಗ್‍ನಲ್ಲಿ ಫುಲ್ ಬ್ಯುಸಿಯಾಗಿದ್ದು, ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಚಿತ್ರೀಕರಣವಾಗುತ್ತಿದೆ.
ಇಂದಿನಿಂದ ಎರಡು ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ನಿರ್ದೇಶಕ ಕೋಡು ರಾಮಕೃಷ್ಣ, ನೃತ್ಯ ನಿರ್ದೇಶಕ ಮಾಸ್ಟರ್ ಗಣೇಶ್ ನೇತೃತ್ವದಲ್ಲಿ ಡ್ಯಾನ್ಸ್ ಶೂಟಿಂಗ್ ನಡೆಯುತ್ತಿದೆ. ನೆಚ್ಚಿನ ನಟ ದರ್ಶನ ನೋಡಲು ಜನಸಾಗರವೇ ಹರಿದು ಬರುತ್ತಿದೆ.
The post ಒತ್ತುವರಿ ವಿಚಾರದಲ್ಲಿ ಎಲ್ಲರಿಗೂ ಒಂದೇ ನ್ಯಾಯ: ದರ್ಶನ್ appeared first on Kannada Public tv.