ಫಾರುಕ್‍ಬಾದ್: ಬಾಲಿವುಡ್ ಸ್ಟಾರ್‍ಗಳಿಗೂ ರೇಷನ್ ಕಾರ್ಡ್ ಇದೆ ಎಂದ್ರೆ ನಂಬ್ತೀರಾ. ಆದ್ರೆ ಉತ್ತರ ಪ್ರದೇಶದಲ್ಲಿ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಸೋನಾಕ್ಷಿ ಸಿನ್ಹಾ, ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ರಾಣಿ ಮುಖರ್ಜಿ ಅವರಿಗೆ ರೇಷನ್ ಕಾರ್ಡ್ ಇದೆ.
ಹೌದು. ಸುಳ್ಳಲ್ಲ ಬಾಲಿವುಡ್ ಬ್ಯೂಟಿಗಳ ಹೆಸರಲ್ಲಿ ರೇಷನ್ ಕಾರ್ಡ್ ಇದ್ದು, ಈ ಕಾರ್ಡ್‍ನಿಂದ ಪ್ರತಿತಿಂಗಳ ರೇಷನ್ ಕೂಡ ವಿತರಣೆಯಾಗುತ್ತಿದೆ. ಇಂತಹದೊಂದು ಘಟನೆ ಉತ್ತರ ಪ್ರದೇಶದ ಫಾರುಖಾಬಾದ್‍ನ ಸಹಬ್‍ಗಂಜ್ ಗ್ರಾಮದಲ್ಲಿ ನಡೆದಿದ್ದು, ರೇಷನ್ ವಿತರಕನೊಬ್ಬ ಬಾಲಿವುಡ್ ನಟಿಯರ ಹೆಸರಿನಲ್ಲಿ ರೇಷನ್ ಕಾರ್ಡ್ ಮಾಡಿಸಿ ಸರ್ಕಾರದ ರೇಷನ್‍ಗೆ ಕನ್ನಾಹಾಕುತ್ತಿದ್ದದ್ದು ಇದೀಗ ಬಯಲಾಗಿದೆ.
ಇದಲ್ಲದೇ ಇನ್ನೂ ಅನೇಕ ನಟ ನಟಿಯರ ಹೆಸರಿನ ರೇಷನ್ ಕಾರ್ಡ್‍ಗಳಿದ್ದು, ಇದರಲ್ಲಿ ಜಾಕ್ವೆಲಿನ್ ಪತಿಯ ಹೆಸರು ಸಾಧು ಲಾಲ್ ಎಂದಿದ್ದರೆ, ದೀಪಿಕಾ ಪಡುಕೋಣೆ ಪತಿಯ ಹೆಸರು ರಾಕೇಶ್ ಚಂದ್ ಎಂದಿದ್ದರೆ, ರಾಣಿ ಪತಿ ರಾಮ ಸ್ವರೂಪ್ ಎಂದಿದ್ದು, ಸೋನಾಕ್ಷಿ ಪತಿಯ ಹೆಸರು ರಮೇಶ್ ಚಂದ್ ಎಂದು ರೇಷನ್ ಕಾರ್ಡ್‍ನಲ್ಲಿದೆ. ಇದರಲ್ಲಿ ದೀಪಿಕಾ ಸಾಮಾನ್ಯವರ್ಗ ಸೇರಿದ್ದರೆ, ಇನ್ನುಳಿದವರು ಓಬಿಸಿಗೆ ಸೇರಿದ್ದಾರೆ.
ಇದೀಗ ಆರೋಪಿ ರೇಷನ್ ಕಾರ್ಡ್ ವಿತರಕನನ್ನು ಪೊಲೀಸರು ಬಂಧಿಸಿದ್ದು, ಈ ಪ್ರಕರಣ ಸಂಬಂಧ ಕೇಸ್ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
The post ಶಾಕಿಂಗ್: ಉತ್ತರಪ್ರದೇಶದಲ್ಲಿ ದೀಪಿಕಾ, ಸೋನಾಕ್ಷಿ, ಜಾಕ್ವೆಲಿನ್, ರಾಣಿಗಿದೆ ರೇಷನ್ ಕಾರ್ಡ್! appeared first on Kannada Public tv.