ಜೈಪುರ: ಗಣೇಶ ಚತುರ್ಥಿಗೆ ಎಲ್ಲೆಡೆ ಗಣೇಶನಿಗೆ ವಿಶೇಷ ತಯಾರಿಗಳು ನಡೆಯುತ್ತಿವೆ. ಹೀಗಿರುವಾಗ ರಾಜಸ್ಥಾನ ಗಣೇಶನಿಗೆ ಲಡ್ಡುವಿನಿಂದ ಅಲಂಕಾರ ಮಾಡಲಾಗಿದೆ.
ಹೌದು. ಜೈಪುರದಲ್ಲಿರುವ ಪ್ರಸಿದ್ಧ ಮೋತಿ ಡೂಂಗ್ರಿ ಗಣೇಶ್ ದೇವಸ್ಥಾನದಲ್ಲಿ ಮೋದಕ ಪ್ರಿಯ ಗಣೇಶನಿಗೆ ಕಮ್ಮಿಯೆಂದರೂ 1.25 ಲಕ್ಷ ಲಡ್ಡುಗಳಿಂದ ಅಲಂಕಾರ ಮಾಡಲಾಗಿದೆ. ಗಣೇಶ ಹಬ್ಬದ ಪ್ರಯುಕ್ತ ಈ ವಿಶೇಷ ಅಲಂಕಾರವನ್ನ ಭಕ್ತರು ಮಾಡಿದ್ದಾರೆ.
ಇದರಲ್ಲಿ 251 ಕೆಜಿ ತೂಕದ ಲಡ್ಡುವೊಂದನ್ನ ನೀಡಿದ್ದರೆ, ಇನ್ನೊಂದು ಲಡ್ಡು 151 ಕೆಜಿ ತೂಕವಿದ್ದರೆ, ಮತ್ತೊಂದು ಲಡ್ಡು 51 ಕೆಜಿ ತೂಕವಿದೆ. ಇದನ್ನ ಹೊರತು ಪಡಿಸಿದರೆ 100 ಗ್ರಾಂ ತೂಕದ ಲಡ್ಡುಗಳನ್ನ ಭಕ್ತರು ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ.
ಜೈಪುರನಲ್ಲಿ ಈ ದೇವಸ್ಥಾನದಲ್ಲಿ ಗಣೇಶ ಹಬ್ಬವನ್ನ ವಾರಗಳ ಕಾಲ ಆಚರಣೆ ಮಾಡಲಾಗುತ್ತಿದ್ದು, ಗಣೇಶ ಹಬ್ಬಕ್ಕೆ ಬರುವ ಭಕ್ತರಿಗೆ ಇದೇ ಲಡ್ಡುಗಳನ್ನೇ ಪ್ರಸಾದವಾಗಿ ನೀಡಲಾಗುತ್ತಿದೆ.
The post ಮೋದಕ ಪ್ರಿಯ ಗಣೇಶನಿಗೆ ಬರೋಬ್ಬರಿ 1.25 ಲಕ್ಷ ಲಡ್ಡುಗಳಿಂದ ಅಲಂಕಾರ! appeared first on Kannada Public tv.