Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80375

ದುಬಾರಿ ಬೌಲಿಂಗಲ್ಲೂ ಪಾಕ್ ದಾಖಲೆ- ಟೀಮ್ ಇಂಡಿಯಾದ ಇಬ್ಬರು ಇದ್ದಾರೆ!

$
0
0

ಟ್ರೆಂಟ್‍ಬ್ರಿಡ್ಜ್: ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ತಂಡವೊಂದರ ಅತಿ ಹೆಚ್ಚು 444 ರನ್ ಗಳಿಸಿದ ವಿಶ್ವದಾಖಲೆ ನಡುವೆ ಇನ್ನೂ ಹಲವು ದಾಖಲೆಗಳು ಸೃಷ್ಟಿಯಾಗಿವೆ. ನಿನ್ನೆ ನಾಟಿಂಗ್‍ಹ್ಯಾಮ್‍ನ ಟ್ರೆಂಟ್‍ಬ್ರಿಡ್ಜ್‍ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ವಹಾಬ್ ರಿಯಾಜ್ ಮತ್ತೊಂದು ದಾಖಲೆ ಬರೆದರು. 10 ಓವರ್‍ಗಳಲ್ಲಿ 110 ರನ್ ನೀಡಿ ವಿಶ್ವದ 2ನೇ ಅತಿ ದುಬಾರಿ ಬೌಲರ್ ಎಂಬ ಕೀರ್ತಿಗೆ ಭಾಜನರಾದರು.

ಹಾಗಾದ್ರೆ ವಿಶ್ವದ ಅತಿ ದುಬಾರಿ ಬೌಲರ್‍ಗಳ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ ಎಂದು ನೋಡಿದಾಗ ವಿಶ್ವದ ಟಾಪ್ 10 ಅತಿ ದುಬಾರಿ ಬೌಲರ್‍ಗಳಲ್ಲಿ ಭಾರತದ ಇಬ್ಬರು ಆಟಗಾರರೂ ಇದ್ದಾರೆ ಎಂಬುದೇ ವಿಶೇಷ. ಭಾರತದ ವಿನಯ್ ಕುಮಾರ್ ಹಾಗೂ ಭುವನೇಶ್ವರ್ ಕುಮಾರ್ ಅವರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಜೊತೆಗೆ ಒಂದು ಪಂದ್ಯದಲ್ಲಿ ಭಾರತದ ದಾಂಡಿಗರು ನ್ಯೂಜಿಲೆಂಡ್‍ನ ಟಿಮ್ ಸೌಥಿ ಬೌಲಿಂಗನ್ನು ನುಚ್ಚು ನೂರು ಮಾಡಿದ್ದರು.

ವಹಾಬ್ ರಿಯಾಜ್ ಎಷ್ಟು ರನ್ ಕೊಟ್ರು?: ನಿನ್ನೆಯ ಪಂದ್ಯದಲ್ಲಿ ರಿಯಾಜ್ 10 ಓವರ್ ಬೌಲಿಂಗ್ ಮಾಡಿದರು. 1ನೇ ಓವರ್-6 ರನ್, 2ನೇ ಓವರ್ – 10, 3ನೇ ಓವರ್-5 ರನ್, 4ನೇ ಓವರ್- 9 ರನ್, 5ನೇ ಓವರ್-8 ರನ್, 6ನೇ ಓವರ್-15 ರನ್, 7ನೇ ಓವರ್ 14 ರನ್, 8ನೇ ಓವರ್-13 ರನ್, 9ನೇ ಓವರ್-6 ರನ್ ನೀಡಿದರೆ, ತಮ್ಮ ಸ್ಪೆಲ್‍ನ 10ನೇ ಓವರ್‍ನಲ್ಲಿ 24 ರನ್ ನೀಡಿ ವಿಶ್ವದ 2ನೇ ಅತಿ ದುಬಾರಿ 2ನೇ ಬೌಲರ್ ಎಂಬ ಕೀರ್ತಿಗೆ ಪಾತ್ರರಾದರು. ಒಟ್ಟಾರೆಯಾಗಿ ಜುಲೈ 30ರಂದು ನಡೆದ ಪಂದ್ಯ ಒಂದು ವಿಶ್ವದಾಖಲೆಯ ಜೊತೆಗೆ ಹಲವು ದಾಖಲೆಗಳಿಗೂ ಕಾರಣವಾಯಿತು.

ಟಾಪ್ 10 ದುಬಾರಿ ಬೌಲರ್‍ಗಳು ಯಾರು?: ಏಕದಿನ ಕ್ರಿಕೆಟ್‍ನ ಇತಿಹಾಸದಲ್ಲಿ ಟಾಪ್ 10 ದುಬಾರಿ ಬೌಲರ್‍ಗಳ ಪಟ್ಟಿಯಲ್ಲಿ ಯಾರಿದ್ದಾರೆ ಎಂಬುದನ್ನು ನೋಡೋದಾದರೆ,

ಟಾಪ್ 10. ಮುತ್ತಯ್ಯ ಮುರಳೀಧರನ್: ಆಸ್ಟ್ರೇಲಿಯಾ ವಿರುದ್ಧ 2006ರ ಫೆಬ್ರವರಿ 12ರಂದು ನಡೆದ ಪಂದ್ಯದಲ್ಲಿ ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ 10 ಓವರ್‍ನಲ್ಲಿ 99 ರನ್ ನೀಡಿದ್ದರು.

ಟಾಪ್ 9. ದೌಲತ್ ಜರ್ದಾನ್: 2015ರ ಮಾರ್ಚ್ 4ರಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಆಪ್ಘಾನಿಸ್ತಾನದ ದೌಲತ್ ಜರ್ದಾನ್ 10 ಓವರ್‍ನಲ್ಲಿ 101 ರನ್ ನೀಡಿದ್ದರು.

 

ಟಾಪ್ 8. ವಿನಯ್ ಕುಮಾರ್: 2013ರ ನವೆಂಬರ್ 2ರಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ವಿನಯ್ ಕುಮಾರ್ 9 ಓವರ್‍ನಲ್ಲಿ 102 ರನ್ ನೀಡಿ ದುಬಾರಿ ಬೌಲರ್ ಎನಿಸಿದ್ದರು.

ಟಾಪ್ 7. ಜಾಸನ್ ಹೋಲ್ಡರ್: 2015ರ ಫೆಬ್ರವರಿ 27ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಜಾಸನ್ ಹೋಲ್ಡರ್ 10 ಓವರ್‍ಗಳಲ್ಲಿ 104 ರನ್ ನೀಡಿದ್ದರು.

ಟಾಪ್ 6. ಬ್ರ್ಯಾನ್ ವಿಟೋರಿ: 2012ರ ಫೆಬ್ರವರಿ 9ರಂದು ನ್ಯೂಜಿಲೆಂಡ್ ವಿರುದ್ಧ ಜಿಂಬಾಬ್ವೆಯ ಬ್ರ್ಯಾನ್ ವಿಟೋರಿ 9 ಓವರ್‍ಗಳಲ್ಲಿ 105 ರನ್ ನೀಡಿ ದುಬಾರಿ ಬೌಲರ್ ಎನಿಸಿದರು.

ಟಾಪ್ 5. ಟಿಮ್ ಸೌಥಿ: 2009ರ ಮಾರ್ಚ್ 8ರಂದು ಭಾರತ ವಿರುದ್ಧ ನ್ಯೂಜಿಲೆಂಡ್‍ನ ಟಿಮ್ ಸೌಥಿ 10 ಓವರ್‍ಗಳಲ್ಲಿ 105 ರನ್ ನೀಡಿದ್ದರು.

ಟಾಪ್ 4. ಮಾರ್ಟಿನ್ ಸ್ನೀಡನ್: 1983ರ ಜೂನ್ 9ರಂದು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್‍ನ ಮಾರ್ಟಿನ್ ಸ್ನೀಡನ್ 12 ಓವರ್‍ನಲ್ಲಿ 105 ರನ್ ನೀಡಿದ್ದರು.

 

ಟಾಪ್ 3. ಭುವನೇಶ್ವರ್ ಕುಮಾರ್: 2015ರ ಅಕ್ಟೋಬರ್ 25ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತದ ಭುವನೇಶ್ವರ್ ಕುಮಾರ್ 10 ಓವರ್‍ಗಳಲ್ಲಿ 106 ರನ್ ನೀಡಿದ್ದರು.

ಟಾಪ್ 2. ವಹಾಬ್ ರಿಯಾಜ್:  2016ರ ಆಗಸ್ಟ್ 30ರಂದು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ವಹಾಬ್ ರಿಯಾಜ್ 10 ಓವರ್‍ಗಳಲ್ಲಿ 110 ರನ್ ನೀಡಿದ್ದರು.

ಟಾಪ್ 1. ಮಿಕ್ ಲೂಯಿಸ್: 2006ರ ಮಾರ್ಚ್ 12ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮಿಕ್ ಲೂಯಿಸ್ 10 ಓವರ್‍ನಲ್ಲಿ 113 ರನ್ ನೀಡಿ ವಿಶ್ವದ ಅತಿ ದುಬಾರಿ ಬೌಲರ್‍ಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದರು.

The post ದುಬಾರಿ ಬೌಲಿಂಗಲ್ಲೂ ಪಾಕ್ ದಾಖಲೆ- ಟೀಮ್ ಇಂಡಿಯಾದ ಇಬ್ಬರು ಇದ್ದಾರೆ! appeared first on Kannada Public tv.


Viewing all articles
Browse latest Browse all 80375

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>