ನವದೆಹಲಿ: ಬಿಜನೂರ್‍ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ರಾಷ್ಟ್ರೀಯ ತನಿಖಾ ದಳ ಅಧಿಕಾರಿ ತಂಜಿಲ್ ಅಹಮದ್ ಅವರ ಪತ್ನಿ ಫರ್ಜಾನಾ ಇಂದು ಸಾವನ್ನಪ್ಪಿದ್ದಾರೆ.
ಏಪ್ರಿಲ್ 3ರ ರಾತ್ರಿ ಕುಟುಂಬದವರೊಂದಿಗೆ ಮದುವೆ ಮುಗಿಸಿಕೊಂಡು ಬರುತ್ತಿದ್ದ ಎನ್‍ಐಎ ಅಧಿಕಾರಿ ತಂಜಿಲ್ ಅವರ ಮೇಲೆ ಬೈಕ್‍ನಲ್ಲಿ ಬಂದ ಮೂವರು 21 ಬಾರಿ ಗುಂಡು ಹಾರಿಸಿದ್ದರು. ಈ ವೇಳೆ ತಂಜಿಲ್ ಅವರ ಪತ್ನಿ ಫರ್ಜಾನಾ ಅವರಿಗೂ ಗುಂಡು ತಗುಲಿ ತೀವ್ರವಾಗಿ ಗಾಯಗೊಂಡಿದ್ದರು. ಫರ್ಜಾನಾ ಅವರನ್ನು ರಾಜಧಾನಿಯ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಈ ಘಟನೆ ನಡೆದು ಇಂದಿಗೆ 10 ದಿನಗಳಾಗಿದ್ದು ಇಂದು ಫರ್ಜಾನಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ರೆಯಾನ್ ಮುತ್ತು ಜೈನುಲ್ ಎಂಬವರನ್ನು ಪೊಲಿಸರು ಬಂಧಿಸಿದ್ದು, ಪ್ರಮುಖ ಆರೋಪಿಯಾದ ಮುನೀರ್‍ಗಾಗಿ ಬಲೆ ಬೀಸಿದ್ದಾರೆ. ಮುನೀರ್ ಬಗ್ಗೆ ಮಾಹಿತಿ ನೀಡಿದವರಿಗೆ 2 ಲಕ್ಷ ರೂ. ಬಹುಮಾನವನ್ನು ಪೊಲೀಸರು ಘೋಷಿಸಿದ್ದಾರೆ.
The post ಕೊಲೆಯಾದ ಎನ್‍ಐಎ ಅಧಿಕಾರಿ ತಂಜಿಲ್ ಪತ್ನಿ ಸಾವು appeared first on Public TV.