– ಸಿಎಂ ಸಿದ್ದರಾಮಯ್ಯಗೆ ಎನ್‍ಆರ್ ರಮೇಶ್ ಸವಾಲ್
– ಒತ್ತುವರಿ ಮಾಡಿದ ಬಿಲ್ಡರ್‍ಗಳ ಪಟ್ಟಿ ಬಿಡುಗಡೆ
ಬೆಂಗಳೂರು: ರಾಜಧಾನಿಯಲ್ಲಿ ನಡೆಯುತ್ತಿರುವ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಇಂದೂ ಮುಂದುವರಿದಿದ್ದರೂ ಇದೀಗ ಈ ಒತ್ತುವರಿ ಮಾಡಿಕೊಂಡವರಲ್ಲಿ ರಾಜಕಾರಣಿಗಳೂ ಭಾಗಿಯಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ನಗರದಲ್ಲಿ ದಾಖಲೆ ಬಿಡುಗಡೆ ಮಾಡಿ ಆರೋಪ ಮಾಡಿದ ಮಾಜಿ ಪಾಲಿಕೆ ಸದಸ್ಯ ಎನ್.ಆರ್. ರಮೇಶ್, ತಾಕತ್ ಇದ್ರೆ ಮುಖ್ಯಮಂತ್ರಿಗಳು ದೊಡ್ಡ ದೊಡ್ಡವರ ಒತ್ತುವರಿ ತೆರವು ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಪ್ರಭಾವಿಗಳು, ರಾಜಕಾರಣಿಗಳ ಪಟ್ಟಿ ಬಿಡುಗಡೆ ಮಾಡಿ, 368 ಬಿಲ್ಡರ್ಸ್, 13 ರಾಜಕಾರಣಿಗಳು, 71 ಅಧಿಕಾರಿಗಳಿಂದಲೇ ಒತ್ತುವರಿ ಆಗಿದೆ ಅಂತ ದೂರಿದ್ರು. ಒತ್ತುವರಿ ಮಾಡಿರುವವರ ವಿರುದ್ಧ ಬಿಎಂಟಿಎಫ್‍ನಲ್ಲಿ ದೂರು ದಾಖಲಾಗಿದೆ. 2300 ಬೃಹತ್ ಕಟ್ಟಡಗಳಿಂದ ರಾಜಕಾಲುವೆ ಒತ್ತುವರಿ ಆಗಿದೆ. ಒತ್ತುವರಿ ಆಗಿರುವ ಜಾಗದ ಮೌಲ್ಯ 1 ಲಕ್ಷದ 20 ಸಾವಿರ ಕೋಟಿ ಬೆಲೆ ಬಾಳುತ್ತದೆ ಎಂದು ಹೇಳಿದರು.
ಶೇ.75 ರಷ್ಟು ಪ್ರದೇಶಗಳನ್ನು ಶೋಭಾ, ಪ್ರೆಸ್ಟಿಜ್, ಮಂತ್ರಿ, ಬ್ರಿಗೇಡ್, ನಿತೇಶ್, ಮಹಾವೀರ್, ಎಲ್ ಆಂಡ್ ಟಿ, ತಾರಾ ಹೌಸಿಂಗ್ ಕಾಪೆರ್Çರೇಷನ್ ನಂತಹ ಬೃಹತ್ ವಸತಿ ಕಟ್ಟಡಗಳು ಒತ್ತುವರಿ ಮಾಡಿಕೊಂಡಿವೆ ಅಂತ ಆರೋಪಿಸಿದ್ರು. ಒಟ್ಟು 29 ಟೆಕ್‍ಪಾರ್ಕ್, ಐಟಿ ಬಿಟಿ ಕಂಪೆನಿಗಳು, 30 ಮಾಲ್ಸ್ ಮತ್ತು ಮಲ್ಟಿಪ್ಲೆಕ್ಸ್ ಸಂಸ್ಥೆಗಳು ಒತ್ತುವರಿಯಲ್ಲಿ ಭಾಗಿಯಾಗಿವೆ ಅಂತ ರಮೇಶ್ ಆರೋಪಿಸಿದ್ರು.
ಒತ್ತುವರಿ ಮಾಡಿಕೊಂಡಿರುವ 20 ಅಧಿಕಾರಿಗಳನ್ನು ಅಮಾನತು ಮಾಡಿ, ಕ್ರಿಮಿನಲ್ ಕೇಸ್ ಹಾಕಿದ್ರೂ, ಅಮಾನತಾದ ಅಧಿಕಾರಿಗಳಿಗೆ ಇಂತಹದೇ ಸ್ಥಾನ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಮತ್ತು ಕೆ.ಜೆ. ಜಾರ್ಜ್ ಶಿಫಾರಸು ಮಾಡಿದ್ದಾರೆ ಎಂದು ಅವರು ದೂರಿದರು.
ಯಾರಿಂದ ಎಷ್ಟು ಒತ್ತುವರಿಯಾಗಿದೆ?
* ಒರಿಯಾನ್ ಮಾಲ್ – 3.07 ಎಕರೆ
* ಎಲಿಟ್ ಪ್ರೊಮಿನೆಡ್ – 600 ಮೀಟರ್
* ಆರ್ ಎಂ ಝೆಡ್ – 1.09 ಎಕರೆ
* ಪ್ರೆಸ್ಟಿಜ್ ಶಾಂತಿ ನಿಕೇತನ್ – 1.30 ಎಕರೆ
* ಯುಬಿ ಸಿಟಿ – 51000 ಚ ಅಡಿ
* ಶೋಭಾ ಇಂದ್ರಪ್ರಸ್ತ – 3.01 ಎಕರೆ
* ಪ್ರೆಸ್ಟಿಜ್ ಫೆರ್ನ್ಸ್ ರೆಸಿಡೆನ್ಸಿ – 50,000 ಸಾವಿರ ಚದರ ಅಡಿ
* ಹ್ಯಾರಿಸ್ ಮಿಲ್ಲರ್ – ಕೆರೆ ಪ್ರದೇಶದ 12,500 ಚದರ ಅಡಿ
ಒತ್ತುವರಿ ರಾಜಕಾರಣಿಗಳ ಪಟ್ಟಿ
ಎಂಎಲ್‍ಸಿ ಎಂ.ಆರ್. ಸೀತಾರಾಂ ಭಾರತೀಯ ವಿಜ್ಞಾನಸಂಸ್ಥೆ ಆವರಣದಲ್ಲಿ 3.06 ಎಕರೆ ವಿಸ್ತೀರ್ಣ ಒತ್ತುವರಿ ಶಾಸಕ ಆರ್.ವಿ. ದೇವರಾe ರಾಜಾಕಾಲುವೆ ಒತ್ತುವರಿ ಮಾಡಿ ಜೆಸಿ ರಸ್ತೆಯ ಪೈ ವೈಸರಾಯ್ ಹೋಟೆಲ್ ನಿರ್ಮಾಣ
ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಐಡಿಯಲ್ ಹೋಮ್ಸ್ ಬಡಾವಣೆ-ಕೆಂಚೇನಹಳ್ಳಿ ಸರ್ವೇ ನಂಬರ್ 10 ಗಿಡದಹಳ್ಳದ 7 ಎಕರೆ ರಾಜಕಾಲುವೆ, ಬಫರ್‍ಝೋನ್ ಕಬಳಿಸಿ ಎಸ್‍ಎಸ್ ಆಸ್ಪತ್ರೆ ನಿರ್ಮಾಣ
The post ಒತ್ತುವರಿಯಲ್ಲಿ ದೊಡ್ಡವರು; ತಾಕತ್ತಿದ್ರೆ ಜಾರ್ಜ್, ಶ್ಯಾಮನೂರು ವಿರುದ್ಧ ಕ್ರಮ ಕೈಗೊಳ್ಳಿ appeared first on Kannada Public tv.