ಬೀಜಿಂಗ್: ವಿಶ್ವದಲ್ಲೇ ಮೊದಲ ಬಾರಿಗೆ ಹ್ಯಾಕ್ ಮಾಡಲು ಅಸಾಧ್ಯವಾಗಿರುವ ಕ್ವಾಟಂ ಸಂವಹನ ಉಪಗ್ರಹವನ್ನು ಚೀನಾ ಯಶಸ್ವಿಯಾಗಿ ಉಡಾವಣೆ ಮಾಡಿದ್ದು ಬಾಹ್ಯಾಕಾಶ ಉಪಗ್ರಹ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಗೋಬಿ ಮರುಭೂಮಿಯಲ್ಲಿರುವ ಜಿಖ್ವಾನ್ ಉಡಾವಣಾ ಕೇಂದ್ರದಿಂದ ಹಾರಿದ ಉಪಗ್ರಹ ಕಕ್ಷೆ ಸೇರಿದೆ. 500 ಕಿಲೋ ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ ಮಿಸಿಯಸ್ ಹೆಸರಿನ 600 ಕೆಜಿ ತೂಕದ ಉಪಗ್ರಹ ಪ್ರತಿ 90 ನಿಮಿಷಕ್ಕೊಮ್ಮೆ ಭೂಮಿಗೆ ಪ್ರದಕ್ಷಿಣೆ ಹಾಕಲಿದೆ.
ಈ ಉಪಗ್ರಹದಿಂದ ಕಳುಹಿಸಲಾಗುವ ಯಾವುದೇ ಸಂದೇಶವನ್ನು ಯಾರಿಗೂ ಕದಿಯಲು ಆಗುವುದಿಲ್ಲ. ಸೈಬರ್ ದಾಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಚೀನಾ ಈ ಉಪಗ್ರಹವನ್ನು ಅಭಿವೃದ್ಧಿ ಪಡಿಸಿದ್ದು ಎರಡು ವರ್ಷ ಕಾರ್ಯ ನಿರ್ವಹಿಸಲಿದೆ.
ಹೇಗೆ ಕಾರ್ಯನಿರ್ವಹಿಸುತ್ತೆ? ಸ್ಮಾರ್ಟ್‍ಫೋನಲ್ಲಿ ಅಪ್‍ಡೇಟ್ ಆಗಿರುವ ವಾಟ್ಸಪ್ ಅಪ್ಲಿಕೇಶನ್ ನಲ್ಲಿ ನೀವು ಎಂಡ್ ಟು ಎಂಡ್ ಎನ್‍ಕ್ರಿಪ್ಶನ್ ಇರುವುದನ್ನು ನೀವು ಗಮನಿಸರಬಹುದು. ಇದೇ ರೀತಿಯಾಗಿ ಈ ಉಪಗ್ರಹ ತಂತ್ರಜ್ಞಾನದಲ್ಲೂ ಗೂಡಲಿಪಿ ಇದೆ. ಉದಾಹರಣೆಗೆ ಇಬ್ಬರ ನಡುವೆ ಸಂವಹನ ನಡೆಯಬೇಕಾದರೆ ಕ್ವಾಟಂ ಕೀ ಬಳಸಲಾಗುತ್ತದೆ. ಈ ಕ್ವಾಟಂ ಕೀ ಮೂಲಕ ಆ ಮಸೇಜ್ ಓಪನ್ ಮಾಡಲಾಗುತ್ತದೆ. ಹೀಗಾಗಿ ಈ ಕ್ವಾಟಂ ಕೀ ಮೂರನೇ ವ್ಯಕ್ತಿಗಳಿಗೆ ಗೊತ್ತಾಗದ ಕಾರಣ ಈ ಸಂದೇಶಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ.
The post ಈ ಉಪಗ್ರಹ ಹ್ಯಾಕ್ ಆಗಲ್ಲ; ಬಾಹ್ಯಾಕಾಶದಲ್ಲಿ ಚೀನಾ ಮೈಲಿಗಲ್ಲು appeared first on Kannada Public tv.