ರಾಯಚೂರು: ಗಂಡ ಹೆಂಡತಿ ಜಗಳ ಉಂಡು ಮಲಗೋವರೆಗೂ ಅಂತಾರೆ. ಆದ್ರೆ ಕೆಲವೊಮ್ಮೆ ಪತಿ ಪತ್ನಿ ಜಗಳ ತಾರಕ್ಕೇರಿದರೆ ಯಾವ ರೀತಿ ಆಗುತ್ತೆ ಎನ್ನೋದಕ್ಕೆ ರಾಯಚೂರಿನಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ.
ಹೌದು. ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಸಾಗುತ್ತಿರಬೇಕಾದರೆ ಗಂಡಹೆಂಡತಿ ನಡುವೆ ಜಗಳ ನಡೆದಿದ್ದು, ಇದರಿಂದ ನೊಂದ ಪತಿ ಚಲಿಸುತ್ತಿದ್ದ ಬಸ್‍ನಿಂದ ಜಿಗಿದಿರುವ ಘಟನೆ ಲಿಂಗಸೂಗೂರು ತಾಲೂಕಿನ ಅಂಕುಶದೊಡ್ಡಿ ಗ್ರಾಮದ ಬಳಿ ನಡೆದಿದೆ. ಪತ್ನಿಯೊಂದಿಗೆ ಜಗಳವಾಡುತ್ತಿದ್ದ ವ್ಯಕ್ತಿ ಕರಿಯಪ್ಪ (38) ಕಿಟಕಿಯಿಂದ ಜಿಗಿದಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನ ಮಸ್ಕಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಸಿಂಧನೂರಿನ ಗದ್ರೆಟಗಿ ಗ್ರಾಮದ ನಿವಾಸಿಯಾಗಿದ್ದು, ಚಿತ್ತಾಪುರದ ದೇವಸ್ಥಾನವೊಂದರ ದರ್ಶನಕ್ಕೆ ದಂಪತಿ ತೆರಳಿದ್ದರು. ಮರಳಿ ಬರುವಾಗ ಜಗಳವಾಡಿ ಬಸ್ ನಿಂದ ಹಾರಿದ್ದಾರೆ. ಕಲಬುರಗಿಯಿಂದ ಹಗರಿಬೊಮ್ಮನಹಳ್ಳಿಗೆ ಸರ್ಕಾರಿ ಬಸ್ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಈ ಸಂಬಂಧ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
The post ಪತ್ನಿ ಜೊತೆ ಜಗಳ: ಚಲಿಸುತ್ತಿದ್ದ ಬಸ್ ಕಿಟಕಿಯಿಂದ ಹಾರಿದ ಪತಿ! appeared first on Kannada Public tv.