ಲಾಸ್ ಏಂಜಲೀಸ್: ಬಾಲಿವುಡ್ ಬಾದ್‍ಷಾ ಶಾರೂಖ್ ಖಾನ್‍ಗೆ ಮತ್ತೆ ಅಮೆರಿಕಾದಲ್ಲಿ ಮತ್ತೆ ಅವಮಾನ ಮಾಡಲಾಗಿದೆ. ನಿನ್ನೆ ರಾತ್ರಿ ಪುತ್ರಿ ಜೊತೆ ಅಮೆರಿಕಾಗೆ ತೆರಳಿದ್ದಾಗ ವಿಚಾರಣೆಯ ನೆಪದಲ್ಲಿ ಲಾಸ್ ಏಂಜಲಿಸ್ ವಿಮಾನ ನಿಲ್ದಾಣದಲ್ಲಿ ಅಮೆರಿಕದ ಇಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಶಾರೂಖ್ ಅಮೆರಿಕದಲ್ಲಿ ಬಂಧನಕ್ಕೊಳಗಾಗಿರುವುದು ಇದು ಮೊದಲೇನಲ್ಲ. 2012ರಲ್ಲಿ ನ್ಯೂಯಾರ್ಕ್ ನಲ್ಲಿ ಕೂಡ ಅವರನ್ನು ಇಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದರು. ಈಗ ಮತ್ತೆ ಬಂಧಿತನಾಗಿರುವುದಕ್ಕೆ ಟ್ವಿಟ್ಟರ್‍ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಭದ್ರತೆಯ ಬಗ್ಗೆ ನನಗೆ ಗೌರವವಿದೆ. ಆದ್ರೆ ಪ್ರತೀಬಾರಿ ಬಂಧಿತನಾಗುತ್ತಿರುವುದಕ್ಕೆ ಬೇಸರವಿದೆ ಅಂತಾ ಹೇಳಿದ್ದಾರೆ. ಇತ್ತ ಟ್ವಿಟ್ಟರ್‍ನಲ್ಲಿ ಶಾರೂಖ್ ಖಾನ್‍ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಸಹಾಯ ಕೋರಿ ಎಂದು ಸಲಹೆ ನೀಡಲಾಗಿದೆ.
I fully understand & respect security with the way the world is, but to be detained at US immigration every damn time really really sucks.
— Shah Rukh Khan (@iamsrk) August 12, 2016
Sorry for the hassle at the airport, @iamsrk – even American diplomats get pulled for extra screening!
— Nisha Biswal (@NishaBiswal) August 12, 2016
The post ಅಮೆರಿಕದಲ್ಲಿ ಮತ್ತೆ ಶಾರೂಖ್‍ಗೆ ಅವಮಾನ: ವಿಚಾರಣೆ ನೆಪದಲ್ಲಿ ವಶಕ್ಕೆ appeared first on Kannada Public tv.