ಧಾರವಾಡ: ವರಮಹಾಲಕ್ಷ್ಮೀ ಹಬ್ಬದ ದಿನ ಮಹದಾಯಿ ಹೋರಾಟಗಾರರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆಯಿದೆ. ಬಂಧನದಲ್ಲಿರುವ ರೈತರ ಜಾಮೀನು ಅರ್ಜಿ ನಿನ್ನೆ ಧಾರವಾಡ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಂಡಿದ್ದು, ಇಂದಿಗೆ ತೀರ್ಪು ಕಾಯ್ದಿರಿಸಲಾಗಿದೆ.
ನಿನ್ನೆ ನ್ಯಾಯಾಲಯದಲ್ಲಿ 187 ರೈತರ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಈ ವೇಳೆ ಸರ್ಕಾರಿ ವಕೀಲರು ಬಂಧಿತ ರೈತರಿಗೆ ಜಾಮೀನು ನೀಡುವ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಹೀಗಾಗಿ ಜಾಮೀನು ಸಿಗುವ ಸಾಧ್ಯತೆ ಹೆಚ್ಚಾಗಿದೆ.
ಇಂದು ಜಾಮೀನು ಸಿಕ್ಕರೆ ಇಂದೇ, ಮಹಾಲಕ್ಷ್ಮೀ ಹಬ್ಬದ ದಿನವೇ ತಮ್ಮ ಗಂಡಂದಿರು, ಮಕ್ಕಳು ಮನೆಗೆ ವಾಪಸ್ ಬರುವ ಸಾಧ್ಯತೆಯಿದೆ.
The post ಮಹದಾಯಿಯ 187 ರೈತರಿಗೆ ಇಂದು ಜಾಮೀನು ಸಾಧ್ಯತೆ appeared first on Kannada Public tv.