ಕೇಪ್‍ಟೌನ್: ಚಿಂಪಾಂಜಿಗಳಿಗೆ ಹಣ್ಣೇ ಆಹಾರ. ಅಂತಹ ಹಣ್ಣು ಒಮ್ಮೆಲೆ ಸಿಕ್ಕಿದಾಗ ಚಿಂಪಾಜಿಗಳು ಏನೂ ಮಾಡುತ್ತವೆ ಎನ್ನುವುದಕ್ಕೆ ಈ ವಿಡಿಯೋವೇ ಸಾಕ್ಷಿಯಾಗಿದೆ.
ಹೌದು. ದಕ್ಷಿಣ ಆಫ್ರಿಕಾದಲ್ಲಿ ಹಸಿವಿನಿಂದ ಹವಣಿಸುತ್ತಿದ್ದ ಚಿಂಪಾಂಜಿವೊಂದು ಕಿತ್ತಳೆಹಣ್ಣನ್ನ ಎತ್ತಿಕೊಂಡು ಹೋಗುತ್ತಿರುವ ವಿಡಯೋ ಈಗ ವೈರಲ್ ಆಗಿದೆ. ಬೇರೆ ಚಿಂಪಾಂಜಿಗಳು ಒಂದೊಂದೆ ಕಿತ್ತಳೆಯನ್ನ ತಿನ್ನುತ್ತಿದ್ದರೆ, ಒಂದು ಚಿಂಪಾಂಜಿ ಮಾತ್ರ ಕೈಲಾಗದಿದ್ರೂ 10 ಕ್ಕೂ ಹೆಚ್ಚು ಕಿತ್ತಳೆ ಹಣ್ಣನ್ನ ಎತ್ತಿಕೊಂಡು ಹೋಗುತ್ತಿದೆ.
ಮೋಗ್ಲಿ ಎಂಬ ಚಿಂಪಾಂಜಿ ಬಾಯಲ್ಲೊಂದು ಕಿತ್ತಳೆ, ಕೈಯಲ್ಲಿ ಒಂದಷ್ಟು ಕಿತ್ತಳೆ ಸಾಲದು ಎಂಬಂತೆ ಎರಡೂ ಕಾಲಲ್ಲೂ ಕಿತ್ತಳೆ ಹಿಡಿದು ಸಾಗುತ್ತಿದ್ದ ದೃಶ್ಯಗಳು ಗಮನ ಸೆಳೆದಿದೆ.
The post ಅಬ್ಬಾ ಏನ್ ಟ್ಯಾಲೆಂಟ್…! ಕಿತ್ತಳೆಯನ್ನ ಈ ಚಿಂಪಾಂಜಿ ಹೇಗೆ ಹೊತ್ತೊಯ್ತು ನೋಡಿ appeared first on Kannada Public tv.