ಇಂಫಾಲ: ಮಣಿಪುರದಲ್ಲಿ ಸೇನಾ ಪಡೆಗಳ ವಿಶೇಷ ಅಧಿಕಾರವನ್ನು ಹಿಂಪಡೆಯುವಂತೆ 16 ವರ್ಷಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೋಮ್ ಶರ್ಮಿಳಾ ಇಂದು ತಮ್ಮ ಸುದೀರ್ಘ ಉಪವಾಸ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ.
ಮೂಗಿನ ಮೂಲಕ ಡ್ರಿಪ್ಸ್‍ನಲ್ಲಿ ದ್ರವ ಆಹಾರ ಸೇವಿಸ್ತಿದ್ದ ಶರ್ಮಿಳಾ 15 ದಿನಗಳ ಹಿಂದೆಯೇ ಈ ಕುರಿತು ಮಾಹಿತಿ ನೀಡಿದ್ದರು. ಇಂದು ಮಾಧ್ಯಮದವರ ಮುಂದೆ ಜೇನು ತುಪ್ಪ ಸೇವಿಸುವ ಮೂಲಕ 16 ವರ್ಷಗಳ ಸುದೀರ್ಘ ಉಪವಾಸ ಕೈಬಿಟ್ಟಿದ್ದಾರೆ.
ಈ ವೇಳೆ ಮಾತನಾಡಿದ ಅವರು, 16 ವರ್ಷಗಳಾದರೂ ಯಾವುದೇ ಫಲ ಸಿಕ್ಕಿಲ್ಲ, ಹೀಗಾಗಿ ವಿಭಿನ್ನ ರೀತಿಯಲ್ಲಿ ಪ್ರತಿಭಟಿಸುತ್ತೇನೆ. 2017ರ ಮಣಿಪುರ ಚುನಾವಣೆಯಲ್ಲಿ ನಿಂತು ಮುಖ್ಯಮಂತ್ರಿಯಾಗಿ ಸೇನಾಪಡೆಗಳ ವಿಶೇಷ ಅಧಿಕಾರವನ್ನು ರದ್ದುಪಡಿಸುವ ಇಚ್ಛೆ ನನ್ನದು ಎಂದು ಘೋಷಿಸಿದರು.
ಇದನ್ನೂ ಓದಿ:ಇರೋಮ್ ಶರ್ಮಿಳಾ ಯಾರು? ಉಪವಾಸ ಸತ್ಯಾಗ್ರಹ ನಡೆಸಿದ್ದು ಯಾಕೆ? ಇಲ್ಲಿದೆ ಸಂಪೂರ್ಣ ಮಾಹಿತಿ
The post ಸಿಎಂ ಆಗಿ ಸೇನಾಪಡೆಗಳ ವಿಶೇಷ ಅಧಿಕಾರ ರದ್ದು ಮಾಡ್ತೀನಿ: ಇರೋಮ್ ಶರ್ಮಿಳಾ appeared first on Kannada Public tv.