ಬೆಂಗಳೂರು: ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪಿನ ಹಿನ್ನೆಲೆಯಲ್ಲಿ ಇವತ್ತು ಸರ್ವಪಕ್ಷ ಸಭೆ ನಡೆಯಲಿದೆ.
ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ವಿಪಕ್ಷ ನಾಯಕರು, ಹಿರಿಯ ನಾಯಕರು, ರಾಜ್ಯದ ಸಂಸದರು, ಉತ್ತರ ಕರ್ನಾಟಕದ ಶಾಸಕರು, ಪರಿಷತ್‍ನ ಕೆಲ ಸದಸ್ಯರು ಭಾಗಿಯಾಗಲಿದ್ದಾರೆ. ಮಹದಾಯಿ ನ್ಯಾಯಾಧೀಕರಣ ತೀರ್ಪು ಹಾಗೂ ಮುಂದೆ ನಡೆಸಬೇಕಾದ ಹೋರಾಟದ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ.
ನ್ಯಾಯಾಧೀಕರಣದ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‍ಗೆ ಹೋಗಬೇಕಾ ಅಥವಾ ಮಹದಾಯಿ ನ್ಯಾಯಾಧೀಕರಣಕ್ಕೆ ಮತ್ತೆ ಪುನರ್ ಪರಿಶೀಲನಾ ಅರ್ಜಿ ಹಾಕಬೇಕಾ ಅಥವಾ ಪ್ರಧಾನಿ ಬಳಿ ನಿಯೋಗ ಕೊಂಡೊಯ್ಯಬೇಕಾ ಎಂಬುದರ ಬಗ್ಗೆ ಇವತ್ತಿನ ಸಭೆಯಲ್ಲಿ ನಿರ್ಧಾರವಾಗೋ ಸಾಧ್ಯತೆಯಿದೆ.
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹಾಗೂ ಸಣ್ಣ ನೀರಾವರಿ ಸಚಿವ ಜಯಚಂದ್ರ ಈಗಾಗಲೇ ಮಹದಾಯಿ ಬಗ್ಗೆ ರಾಜ್ಯದ ಪರ ವಾದ ಮಾಡ್ತಿರೋ ವಕೀಲ ನಾರಿಮನ್ ಬಳಿ ಚರ್ಚಿಸಿರೋ ವಿಷಯಗಳನ್ನ ಸಭೆಯ ಮುಂದಿಡಲಿದ್ದಾರೆ. ಜೊತೆಗೆ ಇತರೆ ಪರಿಣತರ ಸಲಹೆ ಸೂಚನೆಗಳ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಚರ್ಚೆಯಾಗಲಿದೆ. ಅಲ್ಲದೆ ರೈತರ ಮೇಲಿನ ಕೇಸ್‍ಗಳನ್ನ ವಾಪಾಸ್ ಪಡೆಯೋ ಬಗ್ಗೆ ಚರ್ಚೆಯಾಗೋ ಸಾಧ್ಯತೆಯಿದೆ.
The post ಮಹದಾಯಿಗಾಗಿ ಇಂದು ಸರ್ವಪಕ್ಷ ಸಭೆ: ಸಿಎಂ ನೇತೃತ್ವದಲ್ಲಿ ಜನನಾಯಕರ ಮಾತುಕತೆ appeared first on Kannada Public tv.