ಗುವಾಹಟಿ: ಎರಡು ಇಂಡಿಗೋ ವಿಮಾನಗಳು ಗಾಳಿಯಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡು ಅಪಘಾತಕ್ಕೀಡಾಗುವುದರಿಂದ ಸ್ವಲ್ಪದರಲ್ಲಿ ಬಚಾವಾದ ಘಟನೆ ಗುವಾಹಟಿಯಲ್ಲಿ ನಡೆದಿದೆ.
ಅಸ್ಸಾಂನ ಗುವಾಹಟಿಯಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಈ ಘಟನೆ ನಡೆಯುತ್ತಿದ್ದಂತೆ ನಾಲ್ಕು ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿಗಳು ವಿಮಾನದಲ್ಲೇ ಬಿದ್ದಿದ್ದಾರೆ. ಸದ್ಯ ಎರಡು ವಿಮಾನಗಳ ಪೈಲೆಟ್‍ಗಳ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಹೇಗಾಯ್ತು ಘಟನೆ?: ಮುಂಬೈಯಿಂದ ಬರುತ್ತಿದ್ದ ಇಂಡಿಗೋ ವಿಮಾನ ಗುವಾಹಟಿಯ ಲೋಕಪ್ರಿಯಾ ಗೋಪಿನಾಥ್ ಬಾರ್ಡೋಲೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಚೆನ್ನೈಗೆ ಹೊರಟಿದ್ದ ಇನ್ನೊಂದು ಇಂಡಿಗೋ ವಿಮಾನ ಟೇಕ್‍ಆಫ್ ಆಗಿದ್ದು, ಮೋಡ ಕವಿದ ವಾತಾವರಣವಿದ್ದ ಕಾರಣ ಒಂದಕ್ಕೊಂದು ಎದುರುಬದುರಾಗಿದೆ.
ಈ ಘಟನೆ 250 ರಿಂದ 300 ಅಡಿ ಎತ್ತರದಲ್ಲಿ ನಡೆದಿದೆ ಎನ್ನಲಾಗಿದೆ. ಸದ್ಯ ಪೈಲಟ್‍ಗಳ ಜಾಗರೂಕತೆಯಿಂದ ಅಪಾಯ ತಪ್ಪಿದೆ. ನಂತರ ಮುಂಬೈನಿಂದ ಬಂದ ವಿಮಾನ ಗುವಾಹಟಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
The post ಪರಸ್ಪರ ಎದುರಾದ್ವು ವಿಮಾನಗಳು: ಡಿಕ್ಕಿಯಾಗೋದ್ರಿಂದ ಜಸ್ಟ್ ಮಿಸ್ appeared first on Kannada Public tv.