ಲಕ್ನೋ: ಬಿಎಸ್‍ಪಿ ನಾಯಕಿ ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ನಾಪತ್ತೆಯಾಗಿದ್ದ ಉತ್ತರ ಪ್ರದೇಶ ಬಿಜೆಪಿಯ ಉಚ್ಚಾಟಿತ ನಾಯಕ ದಯಾಶಂಕರ್ ಸಿಂಗ್‍ನನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ ಮತ್ತು ಬಿಹಾರ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಬಕ್ಸಾರ್ ನಲ್ಲಿ ಬಂಧಿಸಿದ್ದಾರೆ. ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ದಯಾಶಂಕರ್ ಸಿಂಗ್ ವಿರುದ್ಧ ಎಸ್ ಸಿ/ಎಸ್ ಟಿ ಕಾಯ್ದೆ ಅಡಿ ಎಫ್‍ಐಆರ್ ದಾಖಲಾದ ನಂತರ ತಲೆಮರೆಸಿಕೊಂಡಿದ್ದ.
ಬಿಹಾರದ ಬಕ್ಸಾರ್ ನಲ್ಲಿ ಅಡಗಿದ್ದ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಉಚ್ಚಾಟಿತ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ಜಾರ್ಖಂಡ್ ನ ದೇವಗಢ ಜಿಲ್ಲೆಯ ಶಿವದೇಗುಲಕ್ಕೆ ಭೇಟಿ ನೀಡಿರುವ ಚಿತ್ರಗಳು ಫೇಸ್‍ಬುಕ್ ನಲ್ಲಿ ಕೆಲ ದಿನದ ಹಿಂದೆ ಹರಿದಾಡಿತ್ತು.
ವಿವಾದಾತ್ಮಕ ಹೇಳಿಕೆ ಏನು?
ಹಣ ಕೊಟ್ಟ ವೇಶ್ಯೆಯಾದಳು ತನ್ನ ಕರ್ತವ್ಯವನ್ನು ಚೆನ್ನಾಗಿ ನಿರ್ವಹಿಸುತ್ತಾಳೆ. ಆದರೆ ಮಾಯಾವತಿ ಚುನಾವಣೆಯ ಟಿಕೆಟ್‍ನ್ನು ಒಬ್ಬರಿಗೆ 1 ಕೋಟಿ ರೂ. ನೀಡಿದರೆ, ಮಧ್ಯಾಹ್ನ ಯಾರು 2 ಕೋಟಿ ಕೊಡುತ್ತಾರೋ ಅವರಿಗೆ ನೀಡುತ್ತಿದ್ದಾರೆ. ಸಂಜೆ ಮೂರು ಕೋಟಿ ಕೊಟ್ಟರೆ ಅವರಿಗೆ ಅದೇ ಟಿಕೆಟ್ ನೀಡುತ್ತಾರೆ. ಹೀಗಾಗಿ ಮಾಯಾವತಿ ಚಾರಿತ್ರ್ಯ ವೇಶ್ಯೆಗಿಂತಲೂ ಕಡೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
The post ಮಾಯಾವತಿಯನ್ನು ನಿಂದಿಸಿದ್ದ ಉಚ್ಚಾಟಿತ ಬಿಜೆಪಿ ನಾಯಕ ಅರೆಸ್ಟ್ appeared first on Kannada Public tv.