-ಬಾಗಿಲು ಲಾಕ್ ಆಗೇ ಇರಲಿಲ್ಲ, ಸುಮ್ನೆ ಎನರ್ಜಿ ವೇಸ್ಟ್
ಸಿಡ್ನಿ: ಕುಡಿದ ಮತ್ತಿನಲ್ಲಿ ಜನರು ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸಿಕೊಳ್ಳುತ್ತಾರೆ ಅನ್ನೋದಕ್ಕೆ ಇಲ್ಲೊಂದು ಉದಾಹರಣೆ ಇದೆ. ಕಳ್ಳನೊಬ್ಬ ಗ್ಲಾಸ್ ಡೋರ್‍ಗೆ ರಂಧ್ರ ಕೊರೆದು ಸಾಹಸ ಮಾಡಿ ಒಳನುಗ್ಗಿ ತನ್ನ ಶ್ರಮವನ್ನೆಲ್ಲಾ ವ್ಯರ್ಥ ಮಾಡಿಕೊಂಡಿದ್ದಾನೆ. ಯಾಕಂದ್ರೆ ಆತ ಕುಡಿದ ಮತ್ತಿನಲ್ಲಿ ಬಾಗಿಲು ಲಾಕ್ ಆಗಿಲ್ಲ ಅನ್ನೋದನ್ನೂ ನೋಡಿರಲಿಲ್ಲ.
ಆಸ್ಟ್ರೇಲಿಯಾದ ಹೌಲ್ ಅಟ್ ದಿ ಮೂನ್ ಬಾರ್‍ನಲ್ಲಿ ಈ ಘಟನೆ ನಡೆದಿದ್ದು ಬಾರ್‍ನ ಸಿಸಿ ಕ್ಯಾಮೆರಾದಲ್ಲಿ ಕಳ್ಳನ ಕೃತ್ಯ ಸೆರೆಯಾಗಿದೆ. ಮೊದಲಿಗೆ ಆತ ಒಂದು ಡಬ್ಬದಿಂದ ಗ್ಲಾಸ್‍ಡೋರ್‍ಗೆ ಹೊಡೆದಿದ್ದಾನೆ. ಇದರಿಂದ ಗಾಜು ಚೂರಾಗಿದೆ. ನಂತರ ಬಾಯಲ್ಲಿ ಸಿಗರೇಟ್ ಇಟ್ಟುಕೊಂಡೇ ಬಾಗಿಲಿನ ರಂಧ್ರದ ಮೂಲಕ ಒಳನುಗ್ಗಿದ್ದಾನೆ. ನಂತರ ಬಾಗಿಲು ಲಾಕ್ ಆಗೇ ಇರಲಿಲ್ಲ ಅನ್ನುವುದು ಆತನಿಗೆ ಗೊತ್ತಾಗಿದೆ.
ಬಾರ್ ಮಾಲೀಕರು ಘಟನೆಯ ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು, ಈ ಮೂರ್ಖ ನಿಮಗೇನಾದ್ರೂ ಗೊತ್ತಾ? ಡ್ರಿಂಕ್ಸ್ ಗೋಸ್ಕರ ಜನ ಏನೆಲ್ಲಾ ಮಾಡ್ತಾರಪ್ಪ….! ಅಂತ ಹಾಸ್ಯ ಮಾಡಿದ್ದಾರೆ.
The post ವಿಡಿಯೋ: ಗ್ಲಾಸ್ ಡೋರ್‍ಗೆ ರಂಧ್ರ ಮಾಡಿ ಬಾರ್‍ಗೆ ನುಗ್ಗಿದ ಕಳ್ಳ! appeared first on Kannada Public tv.