ಡೆಹ್ರಾಡೂನ್: ಉತ್ತರಾಖಂಡ್‍ನಲ್ಲಿ ಮಳೆ ಆರ್ಭಟ ಜೋರಾಗಿದ್ದು ನದಿಗಳು ತುಂಬಿ ಹರಿಯುತ್ತಿದ್ದು ಜನರು ಪರದಾಡುತ್ತಿದ್ದಾರೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಜನರನ್ನು ಸುರಕ್ಷಿತ ಸ್ಥಳದತ್ತ ಸ್ಥಳಾಂತರ ಮಾಡಲಾಗುತ್ತಿದೆ.
ಉತ್ತರಾಖಂಡ್‍ನಲ್ಲಿ ಭಾರೀ ಮಳೆಯಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಜನರು ನೆರೆ ಭೀತಿಯಲ್ಲಿದ್ದಾರೆ. ಗಂಗಾ ನದಿಯ ಪ್ರವಾಹ ಹೆಚ್ಚಾಗುತ್ತಿದ್ದು, ತಗ್ಗು ಪ್ರದೇಶಗಳು ಈಗಾಗಲೇ ಜಲಾವೃತಗೊಂಡಿದೆ.
ಉತ್ತರಕಾಶಿಯ ಒಂದು ಗ್ರಾಮದಲ್ಲಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಈ ನದಿಯನ್ನು ಜನ ದಾಟುತ್ತಿರುವ ದೃಶ್ಯ ಕ್ಯಮೆರಾದಲ್ಲಿ ಸೆರೆಯಾಗಿದೆ.
The post ಉತ್ತರಾಖಂಡ್ ಜನ ಇನ್ನೇನು ಮುಳುಗಲಿರುವ ಸೇತುವೆ ದಾಟೋದನ್ನು ನೋಡಿ appeared first on Kannada Public tv.