ಬೆಂಗಳೂರು: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್, ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಸಿಎಂ ಸಿದ್ದರಾಮಯ್ಯ ಅವರ ಸಹೋದ್ಯೋಗಿ ಅದಕ್ಕಾಗಿಯೇ ನನಗೆ ಬೆಂಬಲ, ರಕ್ಷಣೆ ನೀಡುತ್ತಿದ್ದಾರೆ ಅಷ್ಟೇ. ಸಿಎಂ ಹೇಳಿದರೆ ನಾನು ಒಂದು ಕ್ಷಣವೂ ಸಚಿವ ಸ್ಥಾನದಲ್ಲಿ ಮುಂದುವರಿಯಲ್ಲ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ ಎಂದರು.
ಚರ್ಚ್ ಗಲಾಟೆ ಸಂದರ್ಭದಲ್ಲಿ ನಾನು ಮಂಗಳೂರಿಗೆ ಹೋಗಿದ್ದೆ. ಅಲ್ಲದೇ 2013 ಜೂನ್‍ನಲ್ಲಿ ವರ್ಗಾವಣೆ ವಿಚಾರವಾಗಿ ಗಣಪತಿ ನನ್ನನ್ನು ಭೇಟಿಯಾಗಿದ್ದರು. 2 ತಿಂಗಳಲ್ಲಿ ಅವರಿಗೆ ಪೋಸ್ಟಿಂಗ್ ಕೊಟ್ಟೆ. ನಾನು ಗಣಪತಿಗೆ ಕಿರುಕುಳ ನೀಡಿಲ್ಲ. ನನ್ನ ವಿರುದ್ಧ ಯಾವುದೇ ಸಾಕ್ಷಿ ಕೂಡ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
The post ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಜಾರ್ಜ್ appeared first on Kannada Public tv.