ಬೀಜಿಂಗ್: ಮಳೆಗಾಲ ಬಂತೆಂದ್ರೆ ರಸ್ತೆ ಮೇಲೆಲ್ಲ ನೀರು ತುಂಬಿ ಅಕ್ಷರಶಃ ಪ್ರವಾಹದ ಸ್ಥಿತಿ ನಿರ್ಮಾಣವಾಗುತ್ತೆ. ರಸ್ತೆ ಮೇಲೆ ಓಡಾಡೋಕೆ ಆಗದೇ ಜನ ಸಂಕಷ್ಟ ಪಡುತ್ತಾರೆ. ಆದ್ರೆ ಇಲ್ಲೊಬ್ಬ ಕಾಳಿಗೆ ಕೋಲುಗಳನ್ನ ಕಟ್ಟಿಕೊಂಡು ನೀರು ತುಂಬಿದ್ದ ರಸ್ತೆ ಮೇಲೆ ನಡೆದಿದ್ದಾನೆ.
ಹೌದು. ಚೀನಾದ ಯುಹಾನ್‍ನ ಹುಬೈ ಪ್ರಾಂತ್ಯದಲ್ಲಿ ಮಳೆಯಿಂದಾಗಿ ಅಕ್ಷರಶಃ ಪ್ರವಾಹ ನಿರ್ಮಾಣವಾಗಿದೆ. ಈ ಕಾರಣದಿಂದಾಗಿ ರಸ್ತೆ ಮೇಲೆಲ್ಲ ನೀರು ತುಂಬಿ ರಸ್ತೆಗಳೂ ನದಿ ರೀತಿ ಆಗಿಬಿಟ್ಟಿವೆ. ಹೀಗಾಗಿ ವ್ಯಕ್ತಿಯೊಬ್ಬ ನೀರಿನ ಮೇಲೆ ನಡೆಯಲು ಸಖತ್ ಐಡಿಯಾ ಉಪಯೋಗಿಸಿ ಹಾಯಾಗಿ ನೀರಿನ ಮೇಲೆ ನಡೆದಾಡಿದ್ದಾನೆ.
ತನ್ನ ಕಾಲು ನೆನೆಯ ಬಾರದು ಎಂಬ ಕಾರಣಕ್ಕೆ ಈತ ಹೀಗೆ ಕಾಲಿಗೆ ಕೋಲು ಕಟ್ಟಿ ನಡೆದುಕೊಂಡು ಹೋಗಿದ್ದಾನೆ ಎಂದು ಹೇಳಲಾಗಿದೆ. ಈತ ಹೀಗೆ ರಸ್ತೆ ಮೇಲೆ ಒಂಚೂರು ತೊಡಕಿಲ್ಲದೇ ಸಾಗುವುದನ್ನ ಸ್ಥಳೀಯರೊಬ್ಬರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
The post ನೀರು ತುಂಬಿದ ರಸ್ತೆಯಲ್ಲಿ ನಡೆಯೋಕೆ ಈತ ಏನು ಮಾಡಿದ ನೋಡಿ appeared first on Kannada Public tv.