ಬೆಂಗಳೂರು: ರಾಜ್ಯಸಭೆಗೆ ಕರ್ನಾಟಕದಿಂದ ಸ್ಪರ್ಧಿಸಲು ಅವಕಾಶ ನೀಡದ ತಮ್ಮ ವಿರೋಧಿಗಳಿಗೆ ಕೇಂದ್ರ ಸಚಿವ ವೆಂಕಯ್ಯನಾಯ್ಡು ಮಾತಿನೇಟು ನೀಡಿದ್ದಾರೆ. ಕನ್ನಡದಲ್ಲೇ ತಮ್ಮ ಮಾತಿನ ಕಿಡಿ ಹೊರಬಿಟ್ಟ ವೆಂಕಯ್ಯ ನಾನೆಲ್ಲೇ ಗೆದ್ದೂರೂ ನಾನೆಲ್ಲೇ ಇದ್ದರೂ ಕರ್ನಾಟಕದ ನಾಡು ನುಡಿ ನೆಲ ಜಲದ ವಿಚಾರದಲ್ಲಿ ಆ ರಾಜ್ಯದ ಪರ ಧ್ವನಿ ಎತ್ತುವೆ ಅಂತ ಹೇಳಿದ್ದಾರೆ.
ರಾಜ್ಯಸಭೆಗೆ ನಾಲ್ಕನೇ ಭಾರಿ ರಾಜ್ಯದಿಂದ ಸ್ಪರ್ಧಿಸೋ ಅವಕಾಶ ಕಿತ್ತುಕೊಂಡ ರಾಜ್ಯದ, ರಾಜಕೀಯ ವಿರೋಧಿಗಳಿಗೆ ನಾಯ್ಡು ಸಾಹೇಬ್ರು ಕನ್ನಡದಲ್ಲೇ ಉತ್ತರ ನೀಡಿದ್ದಾರೆ. ಭಾಷಾ ವಿಚಾರದಲ್ಲಿ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಸಣ್ಣತನದ ರಾಜಕೀಯ ಮಾಡಲ್ಲ ಎಂದಿದ್ದಾರೆ.
ಸತತ ನಾಲ್ಕು ಬಾರಿ ರಾಜ್ಯಸಭಾ ಸದಸ್ಯರೂ ಕೇಂದ್ರ ಸಚಿವರು ಆಗಿರುವ ಹಿನ್ನೆಲೆಯಲ್ಲಿ ವೆಂಕಯ್ಯನಾಯ್ಡುರವರಿಗೆ ರಾಜ್ಯ ಬಿಜೆಪಿವತಿಯಿಂದ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ನಗರದ ಖಾಸಗೀ ಹೋಟೆಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮುಖಂಡರಾದ ಆರ್ ಅಶೋಕ್, ಸಂಸದರಾದ ಪಿಸಿ ಮೀಹನ್ ಹೀಗೆ ಹಲವು ಗಣ್ಯರು ನಾಯ್ಡುರನ್ನ ಗೌರವಿಸಿದರು.
ಈ ವೇಳೆ ಮಾತನಾಡಿದ ವೆಂಕಯ್ಯನಾಯ್ಡು, ತಮ್ಮ ನೇರನುಡಿಯ ರಾಜಕೀಯ ನಡೆಯನ್ನ ಬಿಚ್ಚಿಟ್ರು. ಅಭಿವೃದ್ಧಿ ವಿಚಾರದಲ್ಲಿ ಪಕ್ಷ ರಾಜಕಾರಣ ಮಾಡಬಾರದು ಅಂತ ಸಲಹೆ ನೀಡಿದ್ರು. ಇದಕ್ಕೆ ಸಿಎಂ ಸಭೆ ನಿದರ್ಶನ ನೀಡಿದ ವೆಂಕಯ್ಯ ಅಂದು ಪ್ರಧಾನಿಗಳು ಸಿಎಂಗಳ ಸಭೆ ಕರೆದಾಗ ಸಿದ್ದರಾಮಯ್ಯ ಅದಕ್ಕೆ ಬರಲಿಲ್ಲ. ಆದರೆ ಬೆಂಗಳೂರಲ್ಲಿ ಸಿಎಂ ಕರೆದಿದ್ದ ಇನ್ವೆಸ್ಟ್ ಕರ್ನಾಟಕ ಸಭೆಗೆ ಕೇಂದ್ರದ ಆರು ಜನ ಸಚಿವರು ಭಾಗವಹಿಸಿದ್ದೆವು. ನಮಗೆ ಅಭಿವೃದ್ಧಿ ಮುಖ್ಯವಾದ ಕಾರಣ ನಾವು ಸಿದ್ದರಾಮಯ್ಯರಂತೆ ಸಭೆ ವಿಚಾರದಲ್ಲಿ ರಾಜಕಾರಣ ಮಾಡದೆ ಭಾಗವಹಿಸಿದೆವು ಅಂತ ಹೇಳಿದ್ರು. ಈಗಿರುವ ಸರ್ಕಾರವನ್ನ ಜನ ಬದಲಾಯಿಸಬೇಕು ಬಿಎಸ್‍ವೈ ಮುಂದಿನ ಸಿಎಂ ಆಗಬೇಕು. ಅವರ ಬೆನ್ನಿಗೆ ನಾನು ಸದಾ ಬೆಂಬಲವಾಗಿ ನಿಲ್ಲುವೆ ಅಂತ ವೆಂಕಯ್ಯನಾಯ್ಡು ಹೇಳಿದರು.
ಅಂತಿಮವಾಗಿ ಎಲ್ಲಾರಾಜಕಾರಣಿಗಳಿಗೂ ನೀತಿ ಪಾಠ ಹೇಳಿದ ವೆಂಕಯ್ಯನಾಯ್ಡು, ರಾಜಕಾರಣಿಗಳು ಮುಖಂಡರಾಗೋದ್ರತ್ತ ಗಮನ ನೀಡಬೇಕು. ಪಕ್ಷ ಬೇಧ ಮರೆತು ಎಲ್ಲರೂ ನಮ್ಮನ್ನ ಬೆಂಬಲಿಸುವಂತೆ ನಾವು ನಡೆದುಕೊಳ್ಳಬೇಕು, ಆ ಮೂಲಕ ರಾಜಕೀಯ ಸಿದ್ದಾಂತಗಳಿಗೆ ಹೊರತಾದ ಅಭಿವೃದ್ಧಿ ವಿಚಾರಗಳಲ್ಲಿ ನಾವು ಪ್ರತಿನಿಧಿಸೋ ರಾಜ್ಯಗಳಿಗೆ ನಮ್ಮ ಕೊಡುಗೆ ನೀಡುವಂತಾಗಬೇಕು ಅಂತ ತಿಳಿಸಿದರು.
The post ವಿರೋಧಿಗಳಿಗೆ ಕನ್ನಡದಲ್ಲೇ ಮಾತಿನೇಟು ನೀಡಿದ ವೆಂಕಯ್ಯನಾಯ್ಡು appeared first on Kannada Public tv.