ಮಂಗಳೂರು: ಶಿಕ್ಷಣ ಕಲಿಯೋಕೆ ಹೋಗುವ ಮಕ್ಕಳಿಗೆ ಶಿಕ್ಷಕರು ವಿದ್ಯೆ ಕಲಿಸಬೇಕು. ಆದ್ರೆ ಇಲ್ಲಿ ಮಕ್ಕಳು ಪಾಠ ಕಲಿಯಲು ಕೂರಬೇಕಾದ್ರೆ ನೀರನ್ನು ಸ್ವಚ್ಛ ಮಾಡ್ಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಯ ಚಿಂತಾಜನಕ ಸ್ಥಿತಿ ಬಗ್ಗೆ ಶಿಕ್ಷಣ ಇಲಾಖೆ ಗಮನಹರಿಸಬೇಕಿದೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಪ್ರಾಥಮಿಕ ಶಾಲೆಯಿದ್ದು, ಮಳೆಗಾಲದಲ್ಲಿ ಶಾಲೆಯೊಳಕ್ಕೆ ನೀರು ಬರುತ್ತೆ. ನೀರಿನಲ್ಲೇ ಕುಳಿತು ಪಾಠ ಕೇಳಬೇಕಾದ ಅನಿವಾರ್ಯತೆ ಎದುರಾದಾಗ ಮಕ್ಕಳೇ ನೀರನ್ನು ಹೊರ ಹಾಕುವ ಕೆಲಸ ಮಾಡ್ತಾರೆ.
ಸುಮಾರು 52 ವರ್ಷಗಳ ಹಿಂದೆ ಆರಂಭವಾಗಿರುವ ಈ ಶಾಲೆಯಲ್ಲಿ ಐದನೇ ತರಗತಿ ಪಾಠ ನಡೆಯುತ್ತಿದ್ದು, ಒಟ್ಟು 22 ಮಕ್ಕಳಿಗೆ ಇಬ್ಬರು ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಒಮ್ಮೆ ಮಳೆ ಬಂದ್ರೆ ಸುಮಾರು ಅರ್ಧ ಅಡಿಯಷ್ಟು ನೀರು ನಿಲ್ಲುತ್ತಿದೆ. ಮಳೆ ನೀರಿನಲ್ಲಿ ಕೂರೋದ್ರಿಂದ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಪೋಷಕರಿದ್ದಾರೆ.
ಒಟ್ಟಾರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕುಸಿಯುತ್ತಿದೆ ಅಂತಾ ಬೊಬ್ಬೆ ಹೊಡೆಯುವ ಸರ್ಕಾರ, ಮಕ್ಕಳು ಬರುತ್ತಿರುವ ಶಾಲೆಗಳ ಮೂಲಭೂತ ಸೌಕರ್ಯ ಒದಗಿಸಲು ಮುಂದಾಗಬೇಕಿದೆ. ಇನ್ನಾದ್ರು ಸ್ಥಳೀಯ ಶಿಕ್ಷಣ ಅಧಿಕಾರಿಗಳು ಎಚ್ಚೆತ್ತುಕೊಳ್ತಾರಾ ಕಾದು ನೋಡ್ಬೇಕು.
The post ಮಳೆ ತಂದ ಸಂಕಷ್ಟ: ಪುತ್ತೂರಿನಲ್ಲಿ ಮಕ್ಕಳಿಂದ ನೀರು ಕ್ಲೀನಿಂಗ್ appeared first on Kannada Public tv.