ಚಿಕ್ಕಮಗಳೂರು: ಮೇವು ಕೊರತೆಯಿಂದಾಗಿ ಜಿಲ್ಲೆಯ ತರೀಕೆರೆ ತಾಲೂಕಿನ ಅಜ್ಜಂಪುರದ ಅಮೃತ್ ಮಹಲ್ ಕಾವಲಿನಲ್ಲಿ ಕಳೆದ ಮೂರು ತಿಂಗಳಲ್ಲಿ 10 ಹಸುಗಳು ಸಾವನ್ನಪ್ಪಿವೆ.
ಕಾವಲಿನಲ್ಲಿ ಹಸು ಹಾಗೂ ಕರುಗಳೆಲ್ಲಾ ಸೇರಿ ಒಟ್ಟು 1800 ಕ್ಕೂ ಹೆಚ್ಚು ರಾಸುಗಳಿದ್ದು ಮೇವು ಹಾಗೂ ಕುಡಿಯೋ ನೀರಿನ ಸಮಸ್ಯೆಯನ್ನ ಎದುರಿಸುತ್ತಿವೆ. ಅಮೃತ್ ಮಹಲ್ ರಾಸುಗಳು ಭಾರತೀಯ ತಳಿಗಳಾಗಿದ್ದು ಇವುಗಳ ಸಂರಕ್ಷಣೆಯಲ್ಲಿ ಸರ್ಕಾರಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆಂದು ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದೀಗ ಮೇವಿನ ಕೊರತೆಯಿಂದ ರಾಸುಗಳು ಸಾವನ್ನಪ್ಪಿರೋದು ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ ಭಾರತೀಯ ತಳಿಗಳ ಉಳಿವಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.