ಮೈಸೂರು: ಈ ಶತಮಾನದ ಮೊದಲ ರಾಯಲ್ ಮದುವೆಗೆ ಮೈಸೂರು ಅರಮನೆ ಸಜ್ಜಾಗಿದೆ. ಕರ್ಕಾಟಕ ಲಗ್ನದಲ್ಲಿ ಯದುವೀರ್ ತ್ರಿಷಿಕಾ ಕೈಹಿಡಿಯಲಿದ್ದಾರೆ. ಈಗಾಗಲೇ ಅರಮನೆಯಲ್ಲಿ ಮದುವೆ ಕಾರ್ಯಕ್ರಮಗಳು ಶುರುವಾಗಿದ್ದು, ಅರಮನೆ ಮಂಟಪದಲ್ಲಿ ಯದುವೀರ್ ಆಸೀನರಾಗಿದ್ದಾರೆ. ಬೆಂಝ್ ಕಾರಿನಲ್ಲಿ ಒಡ್ಡೋಲಗದ ಜೊತೆ ಮದುವೆ ಮಂಟಪಕ್ಕೆ ಯದುವೀರ್ ಅವರನ್ನ ಕರೆತರಲಾಗಿದೆ.
ಯದುವೀರ್ ತಾಯಿ ಪ್ರಮೋದಾದೇವಿ ವಿಶೇಷವಾಗಿ ವಿನ್ಯಾಸಗೊಳಿಸಿದ ಅಂಗಾರಕ ಎಂಬ ಉದ್ದನೆಯ ಕೋಟ್ ಧರಿಸಿದ್ದು, ವಸ್ತ್ರದಲ್ಲಿ ಯದುವಂಶದ ರಾಜಲಾಂಛನ ಗಂಡಬೇರುಂಡ ಎದ್ದು ಕಾಣುತ್ತಿದೆ. ಇದರ ಜೊತೆಗೆ ಹಸಿರು ಪಚ್ಚೆ ಹಾರ, ಲೈಟ್ ಪಿಂಕ್ ಕೋಟ್ ಧರಿಸಿದ್ದು ಚಿನ್ನದ ಕಸೂತಿ ಕೆಲಸಗಳು ವಸ್ತ್ರದಲ್ಲಿ ಮಿಂಚುತ್ತಿದೆ. ವಜ್ರದ ಹಾರ ಜೊತೆ ರಾಜಮನೆತನದ ಆಭರಣಗಳನ್ನ ಯದುವೀರ್ ತೊಟ್ಟಿದ್ದಾರೆ. ಹಸಿರು ಶಲ್ಯಾ, ಗೋಲ್ಟನ್ ಕಲರ್ ಪೇಟ ಧರಿಸಿದ್ದು ರಾಜವೈಭೋಗದ ಮದುವೆ ಕೈಂಕರ್ಯಗಳು ಅರಮನೆಯಲ್ಲಿ ನಡೆಯುತ್ತಿವೆ
ಇಂದು ಅರಮನೆಯಲ್ಲಿ ನಡೆಯೋ ಮದುವೆ ಕಾರ್ಯಕ್ರಮಗಳು ಹೀಗಿವೆ:
* ಬೆಳಗ್ಗೆ 8 ಗಂಟೆಗೆ ನೆರವೇರಿದ ಜೀರಿಗೆ-ಬೆಲ್ಲ ಧಾರಣೆ.
* ಬೆಳಗ್ಗೆ 9.05 ನಿಮಿಷದಿಂದ 9.35ರ ಅವಧಿಯಲ್ಲಿ ಮಾಂಗಲ್ಯ ಧಾರಣೆ.
* ಜ್ಯೇಷ್ಠಮಾಸದ ಕರ್ಕಾಟಕ ಶುಭ ಲಗ್ನದಲ್ಲಿ ಧಾರಾ ಮುಹೂರ್ತ.
* ಸಂಜೆ 5.30 ಸೂರ್ಯಾಸ್ತಮದ ವೇಳೆ ಔಪಾಸನೆ ಕಾರ್ಯಕ್ರಮ.
* ಸಂಜೆ 7 ಗಂಟೆಗೆ ದರ್ಬಾರ್ ಹಾಲ್‍ನಲ್ಲಿ ಔಪಚಾರಿಕ ಆರತಕ್ಷತೆ.
* ಸಂಜೆ 7.30ರಿಂದ ನವ ವಧು-ವರರಿಗೆ ಉರುಟನೆ, ಉಯ್ಯಾಲೆ ಕಾರ್ಯಕ್ರಮ.
* ಸಂಜೆ 7.45 ರಿಂದ 8 ಗಂಟೆಯಲ್ಲಿ ಅರುಂಧತಿ ನಕ್ಷತ್ರ-ಧೃವ ನಕ್ಷತ್ರ ದರ್ಶನ.
The post ಇಂದು ಅರಮನೆಯಲ್ಲಿ ಮದುವೆ ವಿಶೇಷತೆಗಳು ಏನೇನು? appeared first on Kannada Public tv.