ಬಾಗಲಕೋಟೆ: ರಾಸಲೀಲೆ ಪ್ರಕರಣದಲ್ಲಿ ರಾಜೀನಾಮೆ ನೀಡಿ ಮನೆ ಸೇರಿರುವ ಮಾಜಿ ಸಚಿವ ಮೇಟಿ ಬೆಂಬಲಿಗರ ಪುಂಡಾಟಿಕೆ ಮತ್ತೆ ಮುಂದುವರೆದಿದೆ.
ವರದಿ ಮಾಡಲು ಹೋದ ಪಬ್ಲಿಕ್ ಟಿವಿ ಪ್ರತಿನಿಧಿ ಮೇಲೆ ಮಾಜಿ ಸಚಿವ ಎಚ್.ವೈ ಮೇಟಿ ಬೆಂಬಲಿಗ ನಾಗರಾಜ್ ಹದ್ಲಿ, ಅವಾಚ್ಯ ಶಬ್ದ ಬಳಸಿ ನಿಂದನೆ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ರಾಸಲೀಲೆ ಪ್ರಕರಣದ ಕುರಿತು ನಮ್ಮ ಪ್ರತಿನಿಧಿ ಮೇಟಿ ಗೃಹ ಕಛೇರಿಗೆ ತೆರಳಿ ಪ್ರತಿಕ್ರಿಯೆ ಪಡೆಯಲು ಹೋದಾಗ, ಮೇಟಿ ಭಂಟ ನಾಗರಾಜ್ ಹದ್ಲಿ, ಅವಾಚ್ಯ ಶಬ್ದಗಳನ್ನು ಬಳಸಿ, ನಿಂದನೆ ಮಾಡಿದ್ದಾನೆ. ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ನಮ್ಮ ಪ್ರತಿನಿಧಿ ರವಿ ಹಳ್ಳೂರ್ ಹಾಗೂ ಕ್ಯಾಮೆರಾಮನ್ ಶ್ರೀಧರ್ ಅವರನ್ನು ರಕ್ಷಿಸಿ ಹೊರ ಕಳುಹಿಸಿದರು.