Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80022

ದಿಢೀರ್ ಶಶಿಕಲಾ ಭೇಟಿ ಮಾಡಿದ ನಟ ಅಜಿತ್?

$
0
0

ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ಅವರನ್ನು ಪೋಯಸ್ ಗಾರ್ಡನ್‍ನಲ್ಲಿ ನಟ ಅಜಿತ್ ಕುಮಾರ್ ಸೋಮವಾರ ರಾತ್ರಿ ಭೇಟಿಯಾಗಿದ್ದಾರೆಂದು ಮೂಲಗಳು ತಿಳಿಸಿವೆ.

ನಟ ಅಜಿತ್ ಮುಂಬರುವ ಚಿತ್ರವೊಂದರಲ್ಲಿ ನಟಿಸಲು ಬಲ್ಗೇರಿಯಾಕ್ಕೆ ತೆರಳಿದ್ದು, ಕುಟುಂಬದೊಂದಿಗೆ ಕ್ರಿಸ್‍ಮಸ್ ಆಚರಣೆಗಾಗಿ ಕಳೆದವಾರವಷ್ಟೇ ಚೆನ್ನೈಗೆ ಆಗಮಿಸಿದ್ದರು. ಅಂತೆಯೇ ನಿನ್ನೆ ರಾತ್ರಿ ಶಶಿಕಲಾ ಅವರನ್ನು ಭೇಟಿ ಮಾಡಿದ್ದಾರೆ ಎಂದು ಐಎಡಿಎಂಕೆ ಮೂಲಗಳು ಮಾಹಿತಿ ನೀಡಿವೆ.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನಲೆಯಲ್ಲಿ ಕಳೆದ ಸೆಪ್ಟೆಂಬರ್ 22ರಂದು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ವೇಳೆ ಜಯಾರನ್ನು ನೋಡಲು ಯಾರಿಗೂ ಆಸ್ಪತ್ರೆಗೆ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ. ಆದ್ರೆ ಅಜಿತ್ ಜಯಾ ಆರೋಗ್ಯ ವಿಚಾರಿಸಲು ಅನುಮತಿ ಸಿಕ್ಕಿತ್ತು.

ಜಯಲಲಿತಾ ತನ್ನ ಉತ್ತರಾಧಿಕಾರಿಯಾಗಿ ಅಜಿತ್ ಅವರನ್ನು ನೇಮಿಸಬೇಕು ಎಂದು ತನ್ನ ಆಪ್ತರ ಜೊತೆ ಹೇಳಿಕೊಂಡಿದ್ದರು ಎನ್ನುವ ಸುದ್ದಿ ಹರಡಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ಅಜಿತ್ ನಿನ್ನೆ ಶಶಿಕಲಾ ಅವರನ್ನು ಭೇಟಿ ಮಾಡಿರಬಹುದು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.


Viewing all articles
Browse latest Browse all 80022


<script src="https://jsc.adskeeper.com/r/s/rssing.com.1596347.js" async> </script>