ನೆಲಮಂಗಲ: ಹೈಫೈ ಖಾಸಗಿ ಶಾಲೆಗಳ ಹಾವಳಿಗಳ ಮಧ್ಯೆ ಸರ್ಕಾರಿ ಶಾಲೆಗಳು ರಾಜ್ಯದಲ್ಲಿ ಅವನತಿಯತ್ತ ಮುಖಮಾಡಿವೆ. ಈ ಸರ್ಕಾರಿ ಶಾಲೆಯ ಮಕ್ಕಳು ಖಾಸಗಿ ಶಾಲೆಗಿಂತ ಕಮ್ಮಿ ಇಲ್ಲದಂತೆ ಆಟ-ಪಾಠದಲ್ಲಿ ಪ್ರವೀಣರಾಗಿದ್ದರು. ಆದರೆ ಈ ಮಕ್ಕಳಿಗೆ ಪ್ರಚಲಿತ ವಿದ್ಯಾಮಾನದ ಕೊರತೆ ಎದ್ದುಕಾಣಿಸುತ್ತಿದ್ದು, ಪಬ್ಲಿಕ್‍ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ತಮ್ಮ ಕನಸನ್ನ ನನಸು ಮಾಡಿಕೊಂಡಿದ್ದಾರೆ ಈ ಮಕ್ಕಳು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಯಲಚಗೆರೆ ಗ್ರಾಮದ ಸಂಪೂರ್ಣ ಸ್ವಚ್ಛ ಹಾಗೂ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯ ಬಗ್ಗೆ ಬೆಳಕುವಿನಲ್ಲಿ ಕಾರ್ಯಕ್ರಮ ಮಾಡಿದ್ವಿ. ಶಾಲೆಯ ಮಕ್ಕಳು ಓದಿನಲ್ಲಿ ಸೈ ಎನ್ನಿಸಿಕೊಂಡಿದ್ರು ಕಂಪ್ಯೂಟರ್ ಕಲಿಯಲು ಸಾಧ್ಯವಾಗ್ತಿಲ್ಲ ಎಂಬ ಕೊರಗಿನಲ್ಲಿದ್ದರು.
ಬೆಳಕು ಕಾರ್ಯಕ್ರಮದಲ್ಲಿ ಮಕ್ಕಳಿಗೆ ನೀಡಿದ್ದ ಭರವಸೆಯಂತೆ ಶಾಲೆಗೆ ನಾಲ್ಕು ಕಂಪ್ಯೂಟರ್‍ಗಳ ಜೊತೆ ಯುಪಿಎಸ್ ವ್ಯವಸ್ಥೆ ಮಾಡುವ ಮೂಲಕ ಕಂಪ್ಯೂಟರ್ ಲ್ಯಾಬ್‍ಗೆ ಚಾಲನೆ ನೀಡಲಾಗಿದೆ. ಯಲಚಗರೆ ಶಾಲೆಯಲ್ಲಿ ನೂತನವಾದ ಕಂಪ್ಯೂಟರ್ ಡಿಜಿಟಲ್ ಲ್ಯಾಬ್ ಕೊಠಡಿಯನ್ನ, ನೆಲಮಂಗಲ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮನಾಯಕ್ ಹಾಗೂ ಸ್ಥಳಿಯ ಜನಪ್ರತಿನಿಧಿಗಳು ಉದ್ಘಾಟನೆಯನ್ನ ನೆರವೇರಿಸಿದರು.
ಇನ್ನು ಕಷ್ಟದಲ್ಲಿರುವವರಿಗೆ ಬೆಳಕು ಕಾರ್ಯಕ್ರಮದ ಮೂಲಕ ಪಬ್ಲಿಕ್‍ಟಿವಿಯ ಸಾಮಾಜಿಕ ಕಳಕಳಿಯ ಕಾರ್ಯಕ್ರಮವನ್ನು ಸ್ಥಳೀಯರು ಶ್ಲಾಘಿಸಿದರು. ಶಾಲೆಯ ಎಲ್ಲಾ ಮಕ್ಕಳು ಹೃದಯ ಪೂರ್ವಕವಾಗಿ ತಮ್ಮ ಅಭಿನಂದನೆಯನ್ನ ಸಲ್ಲಿಸಿದರು.
ಒಟ್ಟಾರೆ ಹೈಫೈ ಹಾಗೂ ಹೈಟೆಕ್ ಖಾಸಗಿ ಶಾಲೆಗಳ ಹಾವಳಿಗಳ ಮಧ್ಯೆ ಈ ಸರ್ಕಾರಿ ಶಾಲೆಯು ಬೆಳಕು ಕಾರ್ಯಕ್ರಮದ ಮೂಲಕ ಕಂಪ್ಯೂಟರ್ ಡಿಜಿಟಲ್ ಲ್ಯಾಬ್‍ನಿಂದ ರಾಜ್ಯಕ್ಕೆ ಮಾದರಿಯಾಗಿದೆ. ಈ ಗ್ರಾಮೀಣ ಶಾಲೆಯ ಮಕ್ಕಳು ಇನ್ನಷ್ಟು ಓದುಕಲಿಯಲು ಹಾಗೂ ಪ್ರಚಲಿತ ವಿದ್ಯಾಮಾನದ ಅರಿವು ಪಡೆಯಲು ಗಣಕಯಂತ್ರಗಳ ನೆರವಿನ ಸಹಾಯವನ್ನ ಪಬ್ಲಿಕ್‍ಟಿವಿ ಈಡೇರಿಸಿದೆ.