-ನೀವು ನುಂಗೋ ಮಾತ್ರೆಗಳು ಎಷ್ಟು ಸೇಫ್?
ಚಿಕ್ಕಮಗಳೂರು: ನೀವು ಶುಗರ್ ಪೇಶೆಂಟ್ ಆಗಿದ್ದೀರಾ? ಎಷ್ಟೇ ಮಾತ್ರೆ ನುಂಗಿದ್ರೂ ಶುಗರ್ ಕಂಟ್ರೋಲ್‍ಗೆ ಬರ್ತಿಲ್ಲ ಅನ್ನೋ ಚಿಂತೆ ಕಾಡ್ತಿದ್ಯಾ? ಹಾಗಿದ್ರೆ ನೀವು ನುಂಗೋ ಮಾತ್ರೆಗಳು ಸೇಫಲ್ಲ. ಯಾಕಂದ್ರೆ ಸಕ್ಕರೆ ಕಾಯಿಲೆ ರೋಗಿಗಳು ಹೆಚ್ಚಾಗ್ತಿರುವಂತೆ ಮಾರುಕಟ್ಟೆಗೆ ನಕಲಿ ಮಾತ್ರೆಗಳು ಲಗ್ಗೆಯಿಟ್ಟಿವೆ. ಮಾರುಕಟ್ಟೆಯಲ್ಲಿ ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ನಕಲಿ ಮಾತ್ರೆಗಳು ಮಾರಾಟವಾಗ್ತಿವೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊರಟ್ಟಿ ಸಮೀಪದ ರಘು ಅನ್ನೋರು ಸಕ್ಕರೆ ಕಾಯಿಲೆಗೆ ಮಾತ್ರೆ ತೆಗೆದುಕೊಳ್ತಿದ್ರು. ಎಷ್ಟೇ ಮಾತ್ರೆ ನುಂಗಿದ್ರೂ ಸಕ್ಕರೆ ಕಾಯಿಲೆ ಕಡಿಮೆಯಾಗಲಿಲ್ಲ. ಅಚಾನಕ್ಕಾಗಿ ಮೊನ್ನೆ ಬೆಳಗ್ಗೆ ಇವರು ಶೌಚಾಲಯಕ್ಕೆ ಹೋದಾಗ ಮಾತ್ರೆ ಹಾಗೇ ಬಂದಿದೆ. ಆಮೇಲೆ ಮಾತ್ರೆಗಳನ್ನ ಬಿಸಿನೀರಲ್ಲಿ ಹಾಕಿದ್ದಾರೆ. ಆದ್ರೆ ಆ ಮಾತ್ರೆ ಮೂರುದಿನವಾದ್ರೂ ಕರಗೇಯಿಲ್ಲ.
ಮನುಷ್ಯನ ದೇಹದೊಳಗೆ ಮಾತ್ರೆ ಹೋದಾಗ ಹೆಚ್ಚು ಅಂದ್ರೆ 12 ಗಂಟೆಯೊಳಗೆ ಕರಗಬೇಕು. ಕೆಲವರ ದೇಹಸ್ಥಿತಿ ಚೆನ್ನಾಗಿಲ್ಲ ಅಂದ್ರೆ ಒಂದು ದಿನವಾದ್ರೂ ಬೇಕು. ಆದ್ರೆ ಇಲ್ಲಿ ಎಲ್ಲವೂ ಉಲ್ಟಾ ಆಗಿದೆ. ಇದನ್ನೆಲ್ಲಾ ನೋಡಿದ್ರೆ ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ನಕಲಿ ಮಾತ್ರೆಗಳು ಸೇಲಾಗ್ತಿರೋ ಶಂಕೆ ವ್ಯಕ್ತವಾಗ್ತಿದೆ.
ಈ ಬಗ್ಗೆ ವೈದ್ಯರನ್ನ ಕೇಳಿದ್ರೆ ಮನುಷ್ಯನ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಆ್ಯಸಿಡ್ ಇರುತ್ತೆ. ಈ ಮಾತ್ರೆ ಕರಗಲೇ ಬೇಕು. ಆದ್ರೆ ಯಾಕೆ ಕರಗಿಲ್ಲ ಅಂತಾ ಪರೀಕ್ಷಿಸಬೇಕು ಅಂತಾರೆ.
ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಪ್ರಕಾರ ಜಗತ್ತಲ್ಲಿ 422 ಮಿಲಿಯನ್ ಜನ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. 2016 ಏಪ್ರಿಲ್ ವರದಿಯಂತೆ ಭಾರತದಲ್ಲಿ 71 ಮಿಲಿಯನ್ ಅಂದ್ರೆ ಏಳುಕೋಟಿ ಜನ ಮಧುಮೇಹಿಗಳಿದ್ದಾರೆ. 2030ರ ವೇಳೆಗೆ ಜಗತ್ತಲ್ಲಿ ಸಕ್ಕರೆ ಕಾಯಿಲೆ ವಿಶ್ವಕ್ಕೆ ಮಾರಕ ರೋಗವಾಗಲಿದೆಯಂತೆ. ಸೋ ಸಕ್ಕರೆ ಕಾಯಿಲೆ ಇದ್ರೆ ನಿಮ್ಮ ಹುಷಾರಲ್ಲಿ ನೀವಿರಿ.
The post ಮಧುಮೇಹಿಗಳಿಗೆ ಶಾಕಿಂಗ್ ನ್ಯೂಸ್ appeared first on Kannada Public tv.