ತಿರುಚಿರಾಪಳ್ಳಿ: ತಮಿಳುನಾಡಿನ ತಿರುಚಿರಾಪಳ್ಳಿಯ ತುರಾಯೂರಿನಲ್ಲಿ ಸ್ಪೋಟಕ ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿ 10 ಮಂದಿ ದುರ್ಮರಣ ಹೊಂದಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇಂದು ಬೆಳಗ್ಗೆ ಸುಮಾರು 7ಗಂಟೆ ಸಮಯದಲ್ಲಿ ಈ ಸ್ಫೋಟ ಸಂಭವಿಸಿದ್ದು, ಈಗಾಗಲೇ ಅಗಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಕಟ್ಟದ ಕುಸಿದಿದ್ದು, ಇನ್ನೂ ಕೆಲವು ನೌಕರರು ಕಟ್ಟಡದೊಳಗೆ ಸಿಲಿಕಿರುವ ಶಂಕೆಯಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ವೆರ್ರಿವೆಲ್ ಎಕ್ಸ್ ಪ್ಲೋಸಿವ್ ಲಿಮಿಟೆಡ್ ಎಂಬ ಜಿಲಾಟಿನ್ ಉತ್ಪಾದನಾ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಕಡ್ಡಿಗಳನ್ನು ವಾಹನಕ್ಕೆ ತುಂಬಿಸುವಾಗ ಸ್ಫೋಟ ಸಂಭವಿಸಿದೆ. ಘಟನೆನಡೆದಾಗ ಕಟ್ಟಡದಲ್ಲಿ ಸುಮಾರು 20 ಮಂದಿ ನೌಕರರಿದ್ದರು ಎನ್ನಲಾಗಿದೆ.
ಸ್ಪೋಟ ನಡೆದ ಸ್ಥಳದಲ್ಲಿ ಮೊಟ್ರಿಕ್ ಆ್ಯಸಿಡ್‍ನ ಹೊಗೆಯು ಹಬ್ಬಿದ್ದು, ಅದನ್ನು ಈಗ ನಿಯಂತ್ರಣಕ್ಕೆ ತರಲಾಗಿದೆ. ಕಟ್ಟಡಗಳಡಿ ಸಿಲುಕಿರುವ ಕಾರ್ಮಿಕರ ಶೋಧ ಕಾರ್ಯ ಮುಂದುವರೆದಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಹೇಳಲಾಗಿದೆ.